Wednesday, June 26, 2024

ನಟ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂ ಖಾತೆ ಮತ್ತೆ ಆ್ಯಕ್ಟೀವ್​!

ಬೆಂಗಳೂರು: ನಟ ದರ್ಶನ್​ ಧರ್ಮಪತ್ನಿ ವಿಜಯಲಕ್ಷ್ಮಿ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸ್​ ಆಗಿದ್ದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರೀ ಆ್ಯಕ್ಟೀವ್ ಆಗಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್​ನನ್ನು ವಶಕ್ಕೆ ಪಡೆದ ಬೆನ್ನಲ್ಲೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮನ್ನು ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್​ ಫಾಲೋ ಮಾಡಿದ್ದರು. ಬಳಿಕ ಡಿಲೀಟ್​ ಮಾಡಿದ್ದರು. ಒಂದು ವಾರದ ಬಳಿಕ ಇದೀಗ ಮತ್ತೆ ಇನ್ಸ್ಟಾನಲ್ಲಿ ವಿಜಯ ಲಕ್ಷ್ಮೀ ದರ್ಶನ್ ಆ್ಯಕ್ಟಿವ್ ಆಗಿದ್ದಾರೆ.

ಆದರೇ, ಈ ಹಿಂದೆ ತಾವು ಮಾಡಿದ್ದ ಎಲ್ಲ ಪೋಸ್ಟ್ ಗಳನ್ನ ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಇನ್ಸ್ಟಾ ಅಕೌಂಟ್ ನಲ್ಲಿ ವಿಜಿ ದರ್ಶನ್ ಎಂದೇ ಹೆಸರಿದೆ. ಬಯೋದಲ್ಲಿ ಕೂಡ ವಿಜಯಲಕ್ಷ್ಮಿ ದರ್ಶನ್ ಎಂದೇ ಇದೆ.

ಇದನ್ನು ಓದಿ: ರೇಣುಕಾಸ್ವಾಮಿ ಫ್ಯಾಮಿಲಿಗೆ, ಮಗುವಿಗೆ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್​

ದರ್ಶನ್​ ಪರ ವಕೀಲರನ್ನು ನೇಮಿಸಿದ್ದು ಪತ್ನಿ ವಿಜಯಲಕ್ಷ್ಮಿ:

ದರ್ಶನ್ ಅವರ ಜಾಮೀನಿನಾಗಿ ಅವರ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಅವರನ್ನು ವಿಜಯಲಕ್ಷ್ಮಿ ಅವರೇ ನೇಮಿಸಿದ್ದು, ಈ ವಕೀಲರು ವಕಾಲತ್ತು ವಹಿಸಿರುವುದು ಸಹ ವಿಜಯಲಕ್ಷ್ಮಿ ಮತ್ತು ಅವರ ತಂದೆ-ತಾಯಿಯ ಮೂಲಕವೇ.

ವಿಜಯಲಕ್ಷ್ಮಿ ಅವರಿಂದ ನೇಮಿಸಲ್ಪಟ್ಟಿರುವ ವಕೀಲ ಅನಿಲ್ ಬಾಬು ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಪೊಲೀಸ್ ಆಯುಕ್ತರು ಹಾಗೂ ಕೆಲವು ಮಾಧ್ಯಮಗಳು, ಪವಿತ್ರಾ ಗೌಡ ಅವರನ್ನು ದರ್ಶನ್​ರ ಪತ್ನಿ ಎಂದು ಹೇಳುತ್ತಿರುವುದು ವಿಜಯಲಕ್ಷ್ಮಿ ಅವರಿಗೆ ತೀವ್ರ ಬೇಸರ ತಂದಿದೆ. ವಿಜಯಲಕ್ಷ್ಮಿ ಅವರೊಬ್ಬರೇ ದರ್ಶನ್​ರ ಏಕೈಕ ಕಾನೂನುದಬದ್ಧ ಪತ್ನಿ, ಪವಿತ್ರಾ ಗೌಡ ಅಲ್ಲ, ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್​ರ ಪತ್ನಿ ಎಂದು ಸಂಭೋದಿಸಬಾರದು’ ಎಂದಿದ್ದರು.

RELATED ARTICLES

Related Articles

TRENDING ARTICLES