Wednesday, June 26, 2024

ಸೆಕೆಂಡ್ ಹ್ಯಾಂಡ್ ಸುಂದ್ರಿ ಹಿಂದೆ ಬಿದ್ದ ದರ್ಶನ್ ಬಾಳೇ ಛಿದ್ರ!

ಫಿಲ್ಮಿಡೆಸ್ಕ್​: ಸ್ಯಾಂಡಲ್​ವುಡ್​​ನಲ್ಲಿ ಚಕ್ರವರ್ತಿಯಾಗಿ ಮೆರೀತಾ ಇದ್ದ ದರ್ಶನ್​ನ ಜೈಲು ಪಾಲಾಗುವಂತೆ ಮಾಡಿರೋ ಮಾಯಾಂಗನೆಯೇ ಈ ಪವಿತ್ರಾ ಗೌಡ. ಈಕೆಯ ಸೌಂದರ್ಯಕ್ಕೆ ಮರುಳಾಗಿ ಇವತ್ತು ಡಿ ಬಾಸ್ ಅಂತ ಕರೆಸಿಕೊಳ್ತಿದ್ದ ದರ್ಶನ್ ‘ಹೇಡಿ’ ಬಾಸ್ ಆಗಿ ಪೊಲೀಸರ ಎದುರು ಕೈ ಕಟ್ಟಿ ನಿಂತುಕೊಂಡಿದ್ದಾರೆ.

ಅಷ್ಟಕ್ಕೂ ಈ ಪವಿತ್ರಾಳ ಪುರಾಣ ಬಹಳಾನೇ ರೋಚಕವಾಗಿದೆ. ಈಕೆಯ ಸೋಷಿಯಲ್ ಮಿಡಿಯಾ ಪೋಸ್ಟ್​ಗಳನ್ನ ನೋಡಿದ್ರೆ ನೀವು ಕಳೆದೇ ಹೋಗ್ತಿರಿ. ಬ್ರ್ಯಾಂಡೆಂಡ್ ಬಟ್ಟೆಗಳು, ಫಳ ಫಳ ಹೊಳೆಯ ನಕ್ಷತ್ರದಂಥಾ ಆಭರಣಗಳು, ಮೆಡಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಂಡು ಥಳಥಳ ಹೊಳೆಯೋ ಮೈಕೈ.. ಆಹಾ ಇವಳ ಅಂದ, ಚೆಂದ, ಸಿಂಗಾರ, ಬಂಗಾರ ವರ್ಣಿಸೋಕೆ ಪದಗಳೇ ಸಾಲಲ್ಲಾ.

ಹೇಳೋದಕ್ಕೆ ಈಕೆ ಸಿನಿಮಾ ನಟಿ. ಆದ್ರೆ ಈಕೆ ಮಾಡಿದ 4 ಸಿನಿಮಾಗಳ ಪೈಕಿ ಯಾವವೂ ಕೂಡ ನಾಲ್ಕು ದಿನಕ್ಕಿಂತ ಹೆಚ್ಚು ಚಿತ್ರಮಂದಿರದಲ್ಲಿ ಓಡಿಲ್ಲ. ಆದ್ರೆ ಈಕೆಗೆ ಚಿತ್ರರಂಗದ ಘಟಾನುಘಟಿ ನಟಿಮಣಿಯರ ಪರಿಚಯ ಇದೆ. ಈಕೆಯ ಸುತ್ತ ಮುತ್ತ ಸ್ಟಾರ್ ನಟಿಮಣಿಯರು ಇರ್ತಾರೆ.

ಹೌದು, ಇವತ್ತು ರೇಣುಕಾ ಸ್ವಾಮಿ ಕೇಸ್​​ನಲ್ಲಿ A1 ಆಗಿ ನಿಂತಿರೋ ಪವಿತ್ರಾ ಗೌಡಳ ಲೈಫ್​ ಸ್ಟೈಲ್ ಮತ್ತು ಹಿನ್ನೆಲೆ ಸಖತ್ ಜಿಂಗಾಲಾಲ. ಬೆಂಗಳೂರಿನ ಪ್ರತಿಷ್ಠಿತ ಏರಿಯಾ RR ನಗರದಲ್ಲಿ ಪವಿತ್ರಾ ಗೌಡ ತನ್ನದೇ ಆದ ಮೂರಂತಸ್ತಿನ ಬಂಗಲೆ ಹೊಂದಿದ್ದಾಳೆ. ಇದರ ಮಹಜರು ಮಾಡೋದಕ್ಕೆ ಹೋದ ಪೊಲೀಸರೇ ಪವಿತ್ರಾಳ ಮನೆಯ ಸಿರಿತನ ಕಂಡು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ತಗಡು.. ಪುಡಾಂಗು.. ಹೊಸ ಪದಪುಂಜಗಳ ಸೃಷ್ಟಿಕರ್ತ: ಡಿ ಬಾಸ್​ ಬಾಯ್​ ಬಿಟ್ರೆ ಬರೀ ಡ್ಯಾಶ್​ ಡ್ಯಾಶ್​

ಇನ್ನೂ ಇದೇ RR ನಗರದ BEML ಲೇಔಟ್​​ನಲ್ಲಿ ಪವಿತ್ರಾ ತನ್ನದೇ ಆದ ಐಷಾರಾಮಿ ಬೋಟಿಕ್ ವೊಂದನ್ನ ಹೊಂದಿದ್ದಾಳೆ. ಟ್ರೆಡಿಷನಲ್, ವೆಸ್ಟರ್ನ್, ಇಂಡೋ ವೆಸ್ಟರ್ನ್, ಬ್ರೈಡಲ್ ಡಿಸೈನರ್ ಉಡುಗೆಗಳನ್ನ ಇಲ್ಲಿ ಮಾರಾಟ ಮಾಡಲಾಗುತ್ತೆ. RR ನಗರದ ಸಿರಿವಂತರ ಶಾಪಿಂಗ್ ಅಡ್ಡೆ ಇದು.

ಇದರ ಉದ್ಘಾಟನೆಗೆ ಕ್ರೇಜಿ ಕ್ವೀನ್ ರಕ್ಷಿತಾ ಆಗಮಿಸಿದ್ರು. ಅಮೂಲ್ಯ, ಮೇಘಾ ಶೆಟ್ಟಿಯಂಥಾ ನಟಿಮಣಿಯರು ಬಂದು ಪವಿತ್ರಗೆ ಆಲ್ ದಿ ಬೆಸ್ಟ್ ಹೇಳಿದ್ರು. ಪವಿತ್ರಾಳ ಜೊತೆಗೆ ಫೋಟೋಗಳಿಗೆ ಪೋಸ್ ಕೊಟ್ಟಿದ್ರು.

ಇದರ ಬೆಲೆ ಕನಿಷ್ಟ 50 ಲಕ್ಷ. ಪವಿತ್ರಾಳ ಮನೆ ಕಡಿಮೆ ಅಂದ್ರೂ 4-5 ಕೋಟಿಗೆ ಬಾಳುತ್ತೆ. ಇನ್ನೂ ಪವಿತ್ರಾಳ ಮನೆ ಗ್ಯಾರೇಜ್​ನಲ್ಲಿ ರೇಂಜ್ ರೋವರ್ , ಮಿನಿ ಕೂಪರ್ ಸೇರಿದಂತೆ ಕೋಟಿ ಬಾಳುವ ಐಷಾರಾಮಿ ಕಾರುಗಳಿವೆ. ಆಫ್ಟರ್ ಆಲ್ 4 ಸಿನಿಮಾದಲ್ಲಿ ನಟಿಸಿದ ನಟಿಮಣಿ ಇಷ್ಟೆಲ್ಲಾ ಸಂಪಾದಿಸಿದ್ದು ಹೇಗೆ ಅಂತ ಅಚ್ಚರಿ ಪಡಲೇಬೇಕಿಲ್ಲ. ಯಾಕಂದ್ರೆ ಇದೆಲ್ಲದರ ಒಡತಿಯಾಗಿರೋ ಪವಿತ್ರಾಳ ಒಡೆಯ ಚಾಲೆಜಿಂಗ್ ಸ್ಟಾರ್ ದರ್ಶನ್

ಪತ್ನಿಗೆ ಕೊಡಿಸಿದ್ದೆಲ್ಲಾ ತನಗೂ ಬೇಕು.. ಪವಿತ್ರಾ ಹಠ: ಪವಿತ್ರಾ ಸಂಗದಲ್ಲಿ ಮೈಮರೆತು ಕುರುಡನಾಗಿದ್ದ  ದಾಸ

ಹೌದು, ತನಗೆ ಅಂಟಿಕೊಂಡಿದ್ದ ಪವಿತ್ರಾ ಮೇಲೆ ದರ್ಶನ್ ಅದ್ಯಾಪರಿ ಹುಚ್ಚನಾಗಿದ್ದ ಅಂದ್ರೆ ಈಕೆ ಹೇಳಿದ್ದೆಲ್ಲಾ ಕೇಳ್ತಿದ್ದ. ದರ್ಶನ್ ಮನೆ RR ನಗರದಲ್ಲಿದೆ. ತನಗೂ RR ನಗರದಲ್ಲೇ ಮನೆ ಬೇಕು ಅಂತ ಹಠ ಹಿಡಿದು ಈಕೆ ಮನೆ ಕೊಡಿಸಿಕೊಂಡಿದ್ಳು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ ರೇಂಜ್ ರೋವರ್ ಇರೋದನ್ನ ನೋಡಿ ತನಗೂ ರೆಂಜ್ ರೋವರ್ ಕಾರ್ ಬೇಕು ಅಂತ ಪವಿತ್ರಾ ಹಠ ಹಿಡಿದಿದ್ಳಂತೆ. ಇವಳ ಮೋಹಪಾಶದಲ್ಲಿ ಬಿದ್ದಿದ್ದ ದರ್ಶನ್ ಈಕೆಗೂ ಭರ್ತಿ 1.5 ಕೋಟಿ ವೆಚ್ಚದ ಕಾರ್ ಕೊಡಿಸಿದ್ರು.

ಕೋಟಿ ಕೋಟಿ ಸಂಭಾವನೆ ಪಡೀತಿದ್ದ ದರ್ಶನ್, ಅದನ್ನ ತಂದು ಸುರೀತಾ ಇದ್ದಿದ್ದೆಲ್ಲಾ ಈ ಬಣ್ಣದ ಚಿಟ್ಟೆಯ ಮೇಲೆ. ಈ ಚಿಟ್ಟೆಯ ಮೋಹದಲ್ಲಿ ದರ್ಶನ್ ಅದ್ಯಾಪರಿ ಕುರುಡನಾಗಿದ್ದ ಅಂದ್ರೆ ಈ ಚಿಟ್ಟೆ ಕೇಳಿದ್ರೆ ಕನ್ನಂಬಾಡಿ ಕಟ್ಟೆಯನ್ನೇ ಕೊಟ್ಟುಬಿಡುವಷ್ಟು.

ಇದನ್ನೂ ಓದಿ: ದರ್ಶನ್ ಡಿಪ್ರೆಷನ್​​ಗೆ ಹೋಗಿದ್ದಾರೆ :ವಕೀಲ ಅನಿಲ್ ಬಾಬು

10 ವರ್ಷದ ರಿಲೇಶನ್.. ಕೋಟಿ ಕೋಟಿ ಕಲೆಕ್ಷನ್: ಚಕ್ರವರ್ತಿಯ ಅರ್ಧ ಸಾಮ್ರಾಜ್ಯಕ್ಕೆ ಇವಳೇ ಒಡತಿ

ಯೆಸ್, ಪವಿತ್ರಾ ಗೌಡ ದರ್ಶನ್​ಗೆ ಪರಿಚಿತಳಾಗಿ ಹತ್ತು ವರ್ಷಗಳಾಗಿವೆ. ತಮ್ಮ ಸಂಬಂಧಕ್ಕೆ 10 ವರ್ಷ ತುಂಬಿದೆ ಅಂತ ಈಕೆಯೇ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ಳು. ಹತ್ತು ವರ್ಷಗಳ ಈ ಅಕ್ರಮ ಸಂಬಂಧದ ಫಲವೇ ಈ ಐಶ್ವರ್ಯ, ಅಂತಸ್ತು ಎಲ್ಲಾ.

ದರ್ಶನ್ ಒಂದು ರೀತಿ ಈಕೆಯನ್ನ ಉಪಪತ್ನಿಯಂತೆಯೇ ಟ್ರೀಟ್ ಮಾಡ್ತಾ ಇದ್ರು. ತಮ್ಮ ದುಡಿಮೆಯಲ್ಲಿ ಪತ್ನಿ ವಿಜಯಲಕ್ಷ್ನೀ ಮತ್ತು ಮಗ ವಿನೀಶ್​​ಗೆ ಒಂದು ಪಾಲು ಮೀಸಲಿಟ್ಟಿದ್ರು. ಈಕೆ ಕೇಳಿದ್ದೆಲ್ಲಾ ಕೊಡಿಸಿದ್ರು. ಪವಿತ್ರ ಗೌಡ ಮೊದಲ ಪತಿಯಿಂದ ಪಡೆದಿರೋ ಪುತ್ರಿ ಖುಷಿ ಹಾಸ್ಟೆಲ್​ನಲ್ಲಿ ವಾಸ ಮಾಡ್ತಾ ಇದ್ಳು. ಸೋ ಈ ಮೂರಂತಿಸ್ತಿನ ಬಂಗಲೆಯಲ್ಲಿ ಪವಿತ್ರಾಳೇ ರಾಣಿ ದರ್ಶನ್ನೇ ರಾಜ.

ದರ್ಶನ್ ಅನ್ನೋ ಮದಗಜವನ್ನ ಪಳಗಿಸಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಈ ಚೆಲುವೆ ಅದರಿಂದ ಭರ್ತಿ ಲಾಭ ಮಾಡಿಕೊಂಡಿದ್ಳು. ಬ್ರ್ಯಾಂಡೆಂಡ್ ಬಟ್ಟೆ, ನಕ್ಷತ್ರದಂಥಾ ಆಭರಣ ತೊಟ್ಟು ಮೆರೀತಾ ಇದ್ದ ಈ ಬ್ಯೂಟಿ ದರ್ಶನ್​ನ ತನ್ನ ಬೆರಳುಗಳಲ್ಲೇ ಆಟ ಆಡಿಸ್ತಾ ಇದ್ಳು. ಅಂತೆಯೇ ಈಕೆಯ ಮಾತು ಕೇಳಿ ದರ್ಶನ್ ಅಮಾಯಕನನ್ನ ಕಿಡ್ನಾಪ್ ಮಾಡಿ ಕೊಂದೇ ಬಿಟ್ಟಿದ್ದಾನೆ.

ಪವಿತ್ರಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಅವನನ್ನ ಥಳಿಸಿ ಕೊಂದ ಆರೋಪದ ಮೇಲೆ ಇವತ್ತು ದರ್ಶನ್ ಜೈಲು ಪಾಲಾಗಿದ್ದಾರೆ. ಈ ಕೇಸ್​​ನಲ್ಲಿ ಪವಿತ್ರಾ A1 ಆದ್ರೆ ದರ್ಶನ್ A2..  ಚಾಮರಾಜಪೇಟೆ ಸ್ಲಂನಿಂದ ಬಂದ ಪವಿತ್ರಾಳನ್ನ ದರ್ಶನ್ ಏನೋ RR ನಗರದ ರಾಣಿಯಂತೆ ಮೆರೆಸಿದ್ರು. ಆದ್ರೆ ಈ ಸುಂದರಿ ಮಾತ್ರ ದರ್ಶನ್​ನ ಮತ್ತೆ ಸ್ಲಂಗೆ ಕರೆತಂದು ನಿಲ್ಲಿಸಿದ್ದಾಳೆ.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

 

RELATED ARTICLES

Related Articles

TRENDING ARTICLES