Sunday, June 23, 2024

ಕೇ‘ಡಿ’ ಗ್ಯಾಂಗ್ ಗೆ​ ಮತ್ತೆ ಸಂಕಷ್ಟ: ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ

ಬೆಂಗಳೂರು: ಕೇ’ಡಿ’ಗ್ಯಾಂಗ್​ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪ್ರಕರಣದ ಎಲ್ಲಾ ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ACMM ನ್ಯಾಯಾಲಯ ಆದೇಶ ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಎ1 ಪವಿತ್ರಾ ಗೌಡ, ಎ2 ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ವಿಚಾರಣೆ ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲದಲ್ಲಿ ನಡೆಯಿತು, ನ್ಯಾ. ವಿಶ್ವನಾಥ್ ಸಿ.ಗೌಡರ್ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾದೀಶರು ಎಲ್ಲ ಆರೋಪಿಗಳನ್ನು 5 ದಿನಗಳ ಕಾಲ ಮತ್ತೆ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ನೀಡಿದರು.

ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಫಿಲ್ಮಂ ಚೇಂಬರ್​ ಪದಾಧಿಕಾರಿಗಳು ಭೇಟಿ: 5 ಲಕ್ಷ ಪರಿಹಾರ ನೀಡಿ ಸಾಂತ್ವನ

ನಟ ದರ್ಶನ್ ಪರ ವಕೀಲ ಅನಿಲ್​ ಬಾಬು ಹಾಗು ಸರ್ಕಾರದ ಪರ SPP ಪ್ರಸನ್ನ ಕುಮಾರ ವಾದ ಮಂಡಿಸಿದರೆ. ಎ1 ಆರೋಪಿ ಪವಿತ್ರಾಗೌಡ ಸೇರಿ ಇನ್ನುಳಿದ ಆರೋಪಿಗಳ ಪರ ನಾರಾಯಣಸ್ವಾಮಿ ವಾದ ಮಂಡಿಸಿದರು.

RELATED ARTICLES

Related Articles

TRENDING ARTICLES