Wednesday, July 3, 2024

ರೇಣುಕಾಸ್ವಾಮಿ ಕೊಲೆ ಕೇಸ್​ ತಿರುಚಲು ಕೇ‘D’ ಗ್ಯಾಂಗ್​ 1 ಕೋಟಿಗೆ ಡೀಲ್​ ಯತ್ನ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿಹಾಕಲು 1 ಕೋಟಿ ಆಫರ್ ದರ್ಶನ್ ಕಡೆಯಿಂದ ಹೋಗಿತ್ತು ಅನ್ನೋ ಗುಸುಗುಸು ಚರ್ಚೆ ಕೂಡ ಈಗ ನಡೆಯುತ್ತಿದೆ.

ಪೊಲೀಸ್​ ಮತ್ತು ರಾಜಕಾರಣಿಗಳ ಪ್ರಭಾವ ಬಳಸಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ದರ್ಶನ್​​​​ ತರಹೇವಾರಿ ಸರ್ಕಸ್ ಮಾಡಿದ್ದು ಹಂತ ಹಂತವಾಗಿ ಬಯಲಾಗ್ತಿದೆ. ಒಂದು ಕೋಟಿ ಡೀಲ್​​ಗೆ ದರ್ಶನ್​ ಮುಂದಾಗಿದ್ದರು. ತಾನು ಲಾಕ್​ ಆಗೋದು ಪಕ್ಕಾ ಎಂದು ತಿಳಿಯುತ್ತಲೇ ಆ್ಯಕ್ಟೀವ್​ ಆಗಿದ್ದ ದರ್ಶನ್​ 1 ಕೋಟಿ ನೀಡುವ ಆಫರ್​ ಮುಂದಿಟ್ಟಿದ್ದರಾ ಎಂಬ ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ: ದರ್ಶನ್​ ಕರಾಳ ಮುಖ ಬಯಲು: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ

ಈಗಾಗಲೇ ಕೊಲೆಯಾಗಿರುವ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಮರಣೋತ್ತರ ವರದಿಯನ್ನೇ ತಿರುಚಲು ದರ್ಶನ್​ ಮತ್ತು ಗ್ಯಾಂಗ್ ಮುಂದಾಗಿತ್ತು ಎನ್ನಲಾಗ್ತಿದೆ. ಮೃತನು ಹಲ್ಲೆಯಿಂದ ಸಾವಾಗಿಲ್ಲ, ಹಾರ್ಟ್ ಅಟ್ಯಾಕ್​​ನಿಂದ ಸಾವು ಎಂದು ವರದಿ ನೀಡಲು ಆಮಿಷ ಒಡ್ಡಲಾಗಿತ್ತು ಎಂಬ ಗುಸುಗುಸು ಒಂದಿಷ್ಟು ಪೊಲೀಸ್​ ವಲಯಗಳಿಂದಲೇ ಕೇಳಿಬರುತ್ತಿದೆ. ಆದರೇ, ತನಿಖೆ ನಡೆಸುತ್ತಿರೋ ಪೊಲೀಸರು ಮತ್ತು ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.

RELATED ARTICLES

Related Articles

TRENDING ARTICLES