Saturday, October 5, 2024

ನಟ ದುನಿಯಾ ವಿಜಯ್ ದಂಪತಿ ವಿಚ್ಛೇದನ ತೀರ್ಪು ಇಂದು

ಬೆಂಗಳೂರು: ಕನ್ನಡ ಚಿತ್ರರಂಗದ ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ರವರ ವಿಚ್ಛೇದನ ತೀರ್ಪು ಇಂದು ಹೊರ ಬರಲಿದೆ.

2018ರಲ್ಲಿ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಮಧ್ಯಾಹ್ನ ಅಂತಿಮ ತೀರ್ಪು ಹೊರ ಬರಲಿದೆ.

ಇದನ್ನೂ ಓದಿ: ದರ್ಶನ್‌ಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ದ ಅಧಿಕಾರಿಗಳು ಗರಂ

ಸ್ಯಾಂಡಲ್‌ವುಡ್‌ನಿಂದ ಒಂದಾದ ಮೇಲೊಂದು ಶಾಕಿಂಗ್ ನ್ಯೂಸ್ ಹೊರ ಬರುತ್ತಿದೆ. 2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ‘ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ’ ಎಂದು ವಿಜಯ್ ಹೇಳಿದ್ದರು ಎಂದು ತಿಳಿದು ಬಂದಿದೆ. ಈ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿ ಆಗಿತ್ತು. ಕೌರ್ಯ ಮತ್ತು 2 ವರ್ಷಕ್ಕಿಂತ ಹೆಚ್ಚು ಸಮಯ ಬೇರೆ ವಾಸವಿದ್ದಾರೆ ನಾಗರತ್ನ ಎಂದು ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದೂ ವಾದ-ವಿವಾದವನ್ನು ಆಲಿಸಲಾಗಿದೆ. 3 ಘಂಟೆ ನಂತರ ಅರ್ಜಿ ವಿಚಾರಣೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಅವರ ಪರ ವಕೀಲರು ಮಾತ್ರ ಕೋರ್ಟ್​ಗೆ ಹಾಜರಾಗುತ್ತಿದ್ದಾರೆ.

RELATED ARTICLES

Related Articles

TRENDING ARTICLES