Friday, July 5, 2024

ವಾಲ್ಮೀಕಿ ನಿಗಮ ಹಗರಣ: ಇಷ್ಟೇ ದಿನದಲ್ಲಿ ತನಿಖೆ ಮಾಡಿ ಎನ್ನಲು ಆಗಲ್ಲ: ಜಿ. ಪರಮೇಶ್ವರ್

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ ಎಂಬ ಬಿಜೆಪಿ ಆರೋಪ ವಿಚಾರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಹೇಳ್ತಾ ಇರುತ್ತಾರೆ. ಎದಕ್ಕೆಲ್ಲಾ ಹೌದು ಎನ್ನೋಕೆ ಆಗಲ್ಲ. ತನಿಖೆ ಪ್ರಾರಂಭ ಮಾಡಿದ್ದಾರೆ, ತನಿಖೆ ನಡೆಯುತ್ತಿದೆ. ಬ್ಯಾಂಕ್​ ಫ್ರಾಡ್​ ವಿಚಾರಕ್ಕೆ ಸಿಬಿಐ ಕೂಡ ಪ್ರಕರಣದ ವಿಚಾರಣೆಗೆ ಮುಂದಾಗಿದೆ. ಶೀಘ್ರವೇ ತನಿಖೆ ಮಾಡಿ ಎಂದು ಎಸ್​ಐಟಿಗೆ ಹೇಳಿದ್ದೇವೆ. ತನಿಖೆ ವಿಚಾರವಾಗಿ ಒತ್ತಾಯ ಮಾಡೋಕೆ ಆಗಲ್ಲ. ಇಷ್ಟೇ ದಿನದಲ್ಲಿ ತನಿಖೆ ಮಾಡಿ ಅಂತ ಹೇಳೋಕೆ‌ ಆಗಲ್ಲ. ಅವರಿಗೂ ಸಮಯಾವಕಾಶ ಕೊಡಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ

ನಮ್ಮಲ್ಲಿ ಯವುದೇ ಒಳ ಜಗಳವಿಲ್ಲ:

ಕಾಂಗ್ರೆಸ್​ ಪಕ್ಷದಲ್ಲಿ ಒಳಜಗಳ ಶುರುವಾಗಿದೆ ಎಂದು ನಮ್ಮ ಜಿಲ್ಲೆಯ ಶಾಸಕ ಸುರೇಶ್ ಗೌಡ ಅವರು ಹೇಳಿದ್ದಾರೆ. ನಮ್ಮಲ್ಲಿ ಎಲ್ಲಿ ಜಗಳವಾಗಿದೆ ಎನ್ನುವುದು ನನಗೆ ಗೊತ್ತಿಲ್ಲ, ಅದನ್ನು ಅವರು ಎಲ್ಲಿ ನೋಡಿದರೋ ಗೊತ್ತಿಲ್ಲ, ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ ಅದನ್ನು ಬಿಟ್ಟರೇ ನಮ್ಮ ಆಡಳಿತದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಕೇಂದ್ರದಲ್ಲಿ ನಮ್ಮ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಿಗಳಾಗಲಿ:

ಕೇಂದ್ರದಲ್ಲಿ ಅನೇಕ ಜನ ಮಂತ್ರಿಗಳಾಗುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕಕ್ಕೆ ಹೆಚ್ಚು ಸ್ಥಾನಗಳನ್ನು ಕೊಡಲಿ ಎಂದು ನಾನೂ ಕೂಡ ಅಪೇಕ್ಷೆ ಪಡುತ್ತೇನೆ. ಯಾಕೆಂದರೇ ಇವುದರೆಗೆ ಆದ ಮಂತ್ರಿಗಳು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ.

ಈ ಪೈಕಿ ನಿರ್ಮಲ ಸೀತಾರಾಮನ್​ ಸೇರಿದಂತೆ ಹಲವುರು ರಾಜ್ಯದಿಂದ ಆರಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯಕ್ಕೆ ಹೆಚ್ಚಿ ಮಂತ್ರಿ ಸ್ಥಾನಗಳು ಸಿಗಲಿ ಎಂದು ನಿರೀಕ್ಷೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

 

RELATED ARTICLES

Related Articles

TRENDING ARTICLES