Sunday, October 6, 2024

ಮೋದಿ ಜೊತೆ 52 ಸಚಿವರು ಪ್ರಮಾಣವಚನ!: ನೂತನ ಸಂಸದರಿಗೆ ಮೋದಿ ಅಭಿವೃದ್ಧಿ ಪಾಠ

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಚಹಾಕೂಟ ಅಂತ್ಯವಾಗಿದೆ. ಚಹಾಕೂಟದಲ್ಲಿ ನೂತನ ಸಂಸದರಿಗೆ ಮೋದಿ ಅಭಿವೃದ್ಧಿ ಪಾಠ ಮಾಡಿದ್ದಾರೆ. ಇನ್ನು ಮೋದಿ ತಮ್ಮ ನಿವಾಸದಲ್ಲಿ ಸಂಭವನೀಯ ಸಚಿವರಿಗೆ ಆಯೋಜಿಸಿದ್ದ ಚಹಾಕೂಟದಲ್ಲಿ ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

100 ದಿನಗಳ ಕಾರ್ಯಸೂಚಿಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಬಾಕಿ ಇರುವ ಯೋಜನೆಗಳು, ನಿಮಗೆ ಯಾವುದೇ ಇಲಾಖೆ ಸಿಕ್ಕರೂ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಐದು ವರ್ಷಗಳ ರೋಡ್ ಮ್ಯಾಪ್ ಕೂಡ ತಯಾರಿಸಬೇಕು. 2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಜನರು ಎನ್‌ಡಿಎಯನ್ನು ನಂಬಿದ್ದಾರೆ ಅದನ್ನು ಬಲಪಡಿಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ರಚನೆ ಆಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಕೌಂಟ್‌ಡೌನ್ ಶುರುವಾಗಿದೆ. ಮೋದಿ ಪ್ರಮಾಣ ಬೆನ್ನಲ್ಲೇ 52 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ

 

ಸಂಭಾವ್ಯ ಸಚಿವರಿಗೆ ಪ್ರಧಾನಿ ಕಚೇರಿಯಿಂದ ಕರೆ:

ನರೇಂದ್ರ ಮೋದಿ 3.O ದರ್ಬಾರ್​​ಗೆ ಕೌಂಟ್​​​​ಡೌನ್​ ಶುರುವಾಗಿದೆ. ಸಂಭಾವ್ಯ ಸಚಿವರಿಗೆ ಪ್ರಧಾನಿ ಕಚೇರಿಯಿಂದ ಫೋನ್​​​​​​ ಕರೆ ಬಂದಿತ್ತು. ನರೇಂದ್ರ ಮೋದಿ ಆಹ್ವಾನಿಸಿದ ಚಹಾ ಕೂಟದಲ್ಲಿ 52 ಸಂಭಾವ್ಯ ಸಚಿವರು ಭಾಗಿಯಾಗಿದ್ರು. ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಸ್​​.ಜೈಶಂಕರ್, ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ, ಜಯಂತ್ ಚೌಧರಿ ಜಿತನ್ ರಾಮ್ ಮಾಂಝಿ, ರಾಮನಾಥ್ ಠಾಕೂರ್, ಚಿರಾಗ್ ಪಾಸ್ವಾನ್, ಹೆಚ್​​.ಡಿ.ಕುಮಾರಸ್ವಾಮಿ, ಜ್ಯೋತಿರಾದಿತ್ಯ ಸಿಂಧಿಯಾ, ಅರ್ಜುನ್ ರಾಮ್ ಮೇಘವಾಲ್​, ಪ್ರತಾಪ್ ರಾವ್ ಜಾಧವ್​ರನ್ನು ಆಹ್ವಾನಿಸಲಾಗಿತ್ತು.

ಅಂತೆಯೇ, ಕಿರಣ್ ರಿಜುಜು, ಮನ್ಸುಖ್ ಮಾಂಡವಿಯಾ, ಅಶ್ವಿನಿ ವೈಷ್ಣವ್​​, ಜಿ.ಕಿಶನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್​​, ಧರ್ಮೇಂದ್ರ ಪ್ರಧಾನ್​​​, ನಿರ್ಮಲಾ ಸೀತಾರಾಮನ್​​​, ಗಜೇಂದ್ರ ಸಿಂಗ್ ಶೇಖಾವತ್​ ಭಾಗಿಯಾಗಿದ್ರು. ಪ್ರಮಾಣ ವಚನಕ್ಕೆ ಸಿದ್ಧರಿರುವಂತೆ ಮೋದಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

NDA ಮೈತ್ರಿಕೂಟದ 11 ಮಂದಿಗೆ ಸಚಿವ ಸ್ಥಾನ:

ಇನ್ನು, ಎನ್​ಡಿಎ ಮೈತ್ರಿಕೂಟದ 11 ಮಂದಿ ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ. TDPಯ ಪೆಮ್ಮಸಾನಿ ಚಂದ್ರಶೇಖರ್​, ರಾಮಮೋಹನ್​ ನಾಯ್ಡು ಹಾಗೂ JDU ಲಲನ್​ ಸಿಂಗ್​​, ರಾಮನಾಥ್​ ಠಾಕೂರ್​, JDSನಿಂದ ಹೆಚ್​ಡಿಕೆಗೆ ಸಚಿವ ಸ್ಥಾನ ಸಿಗಲಿದೆ. ಇನ್ನು ಜಿತಿನ್​ ರಾಮಾಂಜಿ, ಚಂದ್ರ ಶೇಖರ್​​​​ ಚೌಧರಿ, ರಾಮ್​ದಾಸ್​​ ಸತಾವಳೆ, ಚಿರಾಗ್​ ಪಾಸ್ವಾನ್​​, ಅನುಪ್ರಿಯಾ ಪಟೇಲ್​​, ಪ್ರತಾಪ್​ ರಾವ್​​ ಜಾದವ್​​​​, ಜಯಂತ್​ ಚೌಧರಿ ಸೇರಿದಂತೆ ಒಟ್ಟು 11 ಮಂದಿಗೆ ಸ್ಥಾನ ಸಿಗಲಿದೆ.

ರಾಜ್ಯದ ಐವರಿಗೆ ಸಚಿವ ಸ್ಥಾನ ಫಿಕ್ಸ್!​​​:

ಇನ್ನು ನೂತನ ಸಂಸದ H.D.ಕುಮಾರಸ್ವಾಮಿ ಜೊತೆಗೆ ಮಾಜಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ನಿರ್ಮಲಾ ಸೀತಾರಾಮನ್​​​ ಮತ್ತು ಶೋಭಾ ಕರಂದ್ಲಾಜೆ, ಸಂಸದ ವಿ.ಸೋಮಣ್ಣಗೆ ಕರೆ ಬಂದಿತ್ತು. ಈ ಹಿನ್ನೆಲೆ ಇವರುಗಳಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಪ್ರಧಾನಿ ಜೊತೆ ಸಂಜೆ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES