Sunday, October 6, 2024

ನಾಳೆ ಮೋದಿ ಪ್ರಮಾಣ ವಚನ ಸ್ವೀಕಾರ: ರಾಜ್ಯದ ಯಾವ್ಯಾವ ಸಂಸದರಿಗೆ ಸಚಿವ ಸ್ಥಾನ?

ದೆಹಲಿ: ದೆಹಲಿಯ ರಾಷ್ಟ್ರಪತಿಗಳ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ಪ್ರಧಾನ ಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಯದಲ್ಲೇ ರಾಜ್ಯದ ಯಾವೆಲ್ಲಾ ನೂತನ ಸಂಸದರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಇದರೊಂದಿಗೆ ಮೋದಿ ಸಂಪುಟದಲ್ಲಿ ರಾಜ್ಯಕ್ಕೆಷ್ಟು ಪಾಲು ಸಿಗಲಿದೆ ಎಂಬ ಪ್ರಶ್ನೆ ಮೂಡಿದೆ.

ನೂತನ ಸಚಿವ ಪಟ್ಟಿಯಲ್ಲಿ ಹಿರಿಯ ರಾಜಕಾರಣಿಗಳಾದ ರಾಜ್​ನಾಥ್​ ಸಿಂಗ್​, ಅಮಿತ್ ಶಾ, ನಿತಿನ್​ ಗಡ್ಕರಿ, ಅನುರಾಗ್​ ಠಾಕೂರ್​, ಪಿಯೂಶ್​ ಗೋಯಲ್​, ಗಜೇಂದ್ರ ಸಿಂಗ್​ ಶೇಖಾವತ್​ ಇತರರಿಗೆ ಮಂತ್ರಿಗಿರಿ ಪಕ್ಕ ಎನ್ನಲಾಗುತ್ತಿದ್ದು ಕರ್ನಾಟಕದಿಂದ ಮೈತ್ರಿ ಅಭ್ಯರ್ಥಿ ನೂತನ ಸಂಸದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ. ಈ ನಡುವೆ ಡಾ.ಮಂಜುನಾಥ್​ಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಾಧ್ಯಮ ಲೋಕದ ದಿಗ್ಗಜ ‘ರಾಮೋಜಿ ರಾವ್’​ ವಿಧಿವಶ!

ಬ್ರಾಹ್ಮಣ ಸಮುದಾಯದ ನಾಯಕರಾದ ಧಾರವಾಡ ಲೋಕಸಭಾ ಕ್ಷೇತ್ರದ ಪ್ರಹ್ಲಾದ್‌ ಜೋಶಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಜೊತೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಗೋವಿಂದ ಕಾರಜೋಳಗೂ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ನಾಲ್ಕು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.

ಇನ್ನುಳಿದಂತೆ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ ಪೂಜಾರಿ,
ಪಿ.ಸಿ.ಮೋಹನ್​​​​ಗೂ ಸಚಿವ ಸ್ಥಾನ ಒಲಿದು ಬರಲಿದೆ ಎಂದು ಹೇಳಲಾಗುತ್ತಿದೆ. ಸಂಭಾವ್ಯ ಸಂಸದರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದ್ದು ಯಾವ ಖಾತೆಗಳನ್ನು ಹಂಚಿಕೆಯಾಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

RELATED ARTICLES

Related Articles

TRENDING ARTICLES