Wednesday, July 3, 2024

ಭವಾನಿ ರೇವಣ್ಣಗೆ ತಾತ್ಕಾಲಿಕ ರಿಲೀಫ್​: ಮಧ್ಯಂತರ ನಿರೀಕ್ಷಣಾ ಜಾಮೀನು ಮಜೂರು

ಬೆಂಗಳೂರು: ಮೈಸೂರಿನ ಕೆ.ಆರ್​ ನಗರದ ಸಂತ್ರಸ್ತ ಮಹಿಳೆ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿ ಹೊಳೆ ನರಸೀಪುರ ಶಾಸಕ ಹೆಚ್​.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಇಂದು ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದೂ ಭವಾನಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ.

ಕೆ.ಆರ್ ನಗರ ಸಂತ್ರಸ್ತ ಮಹಿಳೆ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಭವಾನಿ ರೇವಣ್ಣ, ಅನಾರೋಗ್ಯದ ಕಾರಣ ನೀಡಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ರಾಜ್ಯ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮನವಿಯನ್ನು ಪುರಸ್ಕರಿಸಿದ್ದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ:ಬೆಂಗಳೂರಿನ ಕೋರ್ಟ್‍ನಲ್ಲಿಂದು ರಾಹುಲ್​ ಗಾಂಧಿ ವಿಚಾರಣೆ

ಇದೇ ವೇಳೆ, ಕಿಡ್ನಾಪ್​ ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಸಹಕರಿಸುವಂತೆ ಸೂಚನೆ ನೀಡಿದ ನ್ಯಾಯಾಲಯವು ಮಧ್ಯಾಹ್ನ 1 ಗಂಟೆ ವೇಳೆಗೆ ಎಸ್​ಐಟಿ ಎದುರು ಹಾಜರಾಗುವಂತೆ ತಿಳಿಸಿದೆ.

ಸಂತ್ರಸ್ತ ಮಹಿಳೆಯ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿ ಭವಾನಿ ರೇವಣ್ಣ ಅವರನ್ನು ಎಸ್​ಐಟಿ ತನಿಖೆಗೆ ಕರೆದಿತ್ತು. ಆದರೆ ಬಂಧನದ ಭೀತಿಯಲ್ಲಿದ್ದ ಭವಾನಿ ತನಿಖೆಗೆ ಸಹಕರಿಸದೆ ಕಣ್ಮರೆಯಾಗಿದ್ದರು. ನಂತರ ಎಸ್​ಐಟಿ ತಂಡ ಅವರನ್ನು ಬಂಧಿಸಲು ಮುಂದಾಗಿತ್ತು. ಆದರೆ ಭವಾನಿಯವರು ಎಲ್ಲೂ ಸಿಕ್ಕಿರಲಿಲ್ಲ. ಇದೀಗ ಹೈಕೋರ್ಟ್​ ಏಕಸದಸ್ಯ ಪೀಠದಿಂದ ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ತನಿಖೆಗೆ ಸಹಕರಿಸುವಂತೆ ಕೋರ್ಟ್​ ಹೇಳಿದೆ.

RELATED ARTICLES

Related Articles

TRENDING ARTICLES