Saturday, October 5, 2024

ಚಂದನ್​ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನ ಅಂತ್ಯ!

ಬೆಂಗಳೂರು: ಬಿಗ್​ ಬಾಸ್ ಕನ್ನಡ ಸೀಸನ್​-5 ರ​ ಸ್ಪರ್ಧಿಗಳಾದ ರ್ಯಾಪರ್​ ಚಂದನ್​ ಶೆಟ್ಟಿ ಹಾಗು ನಿವೇದಿತಾ ಗೌಡಬ್ಬರ ದಾಂಪತ್ಯ ಜೀವನ ಮುರಿದು ಬಿದ್ದಿದ್ದು ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಪವರ್​ ಟಿವಿಗೆ ಲಭ್ಯವಾಗಿದೆ.

ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿದ್ದು ಇದೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ. ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರೇವ್​ ಪಾರ್ಟಿ ಪ್ರಕರಣ: ತೆಲುಗು ಚಿತ್ರರಂಗದಿಂದ ನಟಿ ಹೇಮಾ ಅಮಾನತ್ತು

ಬಿಗ್ ಬಾಸ್ ಕನ್ನಡ ಸೀಸನ್​-5​ ನಲ್ಲಿ ಪರಿಚಯವಾದ ಚಂದನ್​ ಶೇಟ್ಟಿ ಮತ್ತು ನಿವೇದಿತಾಗೆ ಇಬ್ಬರ ನಡುವೆ ಪ್ರೇಮಾಂಕುರವಾಗಿ, ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2020 ರ ಫೆಬ್ರವರಿಯಲ್ಲಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಇಬ್ಬರ ಕುಟುಂಬ ಒಪ್ಪಿ ಅದ್ದೂರಿಯಾಗಿ ಮದುವೆ ನೆರವೇರಿಸಿಕೊಟ್ಟಿದ್ದರು. ಇದೀಗ ನಾಲ್ಕು ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ.

RELATED ARTICLES

Related Articles

TRENDING ARTICLES