Saturday, June 29, 2024

ಪ್ರಜ್ವಲ್ ವಿಚಾರಣೆ ಹೊಣೆ ಲೇಡಿ ಪೊಲೀಸ್ ಟೀಂ ಹೆಗಲಿಗೆ

ಬೆಂಗಳೂರು: ವಿಕೃತ ಕಾಮಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಗೆ ಮಹಿಳಾ ಅಧಿಕಾರಿಗಳನ್ನೇ ತನಿಖಾಧಿಕಾರಿಗಳನ್ನಾಗಿ ನೇಮಿಸಿ ಎಸ್‌ಐಟಿ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ವಿದೇಶದಿಂದ ಬಂದಿಳಿದ ಕೂಡಲೇ ಪ್ರಜ್ವಲ್ ಅವರನ್ನು ಎಸ್‌ಪಿ ಡಾ.ಸುಮನ್ ಡಿ.ಪೆನ್ನೇಕರ್ ನೇತೃತ್ವದ ಮಹಿಳಾ ಅಧಿಕಾರಿಗಳ ತಂಡ ಬಂಧಿಸಿತು. ಬಳಿಕ ಜೀಪಿನಲ್ಲಿ ಸಾಮಾನ್ಯ ಆರೋಪಿಯಂತೆ ಪ್ರಜ್ವಲ್‌ರನ್ನು ಮಧ್ಯದಲ್ಲಿ ಕೂರಿಸಿಕೊಂಡು ಅಜುಬಾಜಿನಲ್ಲಿ ಇನ್ಸ್‌ಪೆಕ್ಟರ್​​ಗಳಾದ ಶೋಭಾ ಮತ್ತು ತಂಡ ಕುಳಿತರು. ಮುಂದಿನ ಆಸನದಲ್ಲಿ ತನಿಖಾಧಿಕಾರಿ ಸುಮಾರಾಣಿ ಅಸೀನರಾಗಿದ್ದರು. ಈ ಜೀಪಿನ ಮುಂದೆ ಭದ್ರತೆಗೆ ಖುದ್ದು ಎಸ್ಪಿ ಸುಮನ್ ಅವರ ವಾಹನ ಸಾಗಿತು. ಆನಂತರ ವೈದ್ಯಕೀಯ ತಪಾಸಣೆ ಹಾಗೂ ನ್ಯಾಯಾಲಯದಮುಂದೆ ಹಾಜರುಪಡಿಸಲು ಪ್ರಜ್ವಲ್ ಅವರನ್ನು ಮಹಿಳಾ ಅಧಿಕಾರಿಗಳು ಕರೆದೊಯ್ದರು.

ಇದನ್ನೂ ಓದಿ: ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಅರೆಸ್ಟ್​: ಬಂಧನ ಭೀತಿಯಲ್ಲಿ ಭವಾನಿ

ಪ್ರಜ್ವಲ್ ವಿರುದ್ಧ ದಾಖಲಾಗಿರುವ ಮೂರು ಅತ್ಯಾಚಾರ ಪ್ರಕರಣಗಳ ತನಿಖಾಧಿಕಾರಿಗಳಾಗಿ ಮೂವರು ಮಹಿಳಾ ಇನ್ಸ್‌ಪೆಕ್ಟರ್‌ಗಳನ್ನೇ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇಮಿಸಿದ್ದಾರೆ. ಮಹಿಳಾ ಪೊಲೀಸರಿಂದ ಅರೆಸ್ಟ್‌ ಮಾಡಿಸಿ ಹೆಣ್ಣು ಅಬಲೆಯಲ್ಲ, ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶ ರವಾನಿಸಿದೆ.

RELATED ARTICLES

Related Articles

TRENDING ARTICLES