Sunday, October 6, 2024

ಕೇರಳದಲ್ಲಿ ಮಾನ್ಸೂನ್​ ಮಳೆ ಆರಂಭ: ನಾಳೆಯಿಂದ ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಕೇರಳದಲ್ಲಿ ಭಾರಿ ಪ್ರಮಾಣದ ಮನ್ಸೂನ್​ ಮಳೆ ಆರಂಭವಾಗಲಿರುವ ಹಿನ್ನೆಲೆ ನಾಳೆಯಿಂದ ಕರ್ನಾಟಕದಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಾನ್ಸೂನ್​ ಮಳೆ ಆರಂಭವಾಗುತ್ತಿರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ನಾಳೆಯಿಂದ  ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: HSRP ಅಳವಡಿಕೆಗೆ ಜೂನ್​12 ಕೊನೆ: ಅಂತಿಮ ಗಡುವು ಮೀರಿದರೆ ವಾಹನ ಸೀಜ್​

ನಾಳೆಯಿಂದ ಐದು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದ್ದು ಜೂನ್ 3ರ ಹೊತ್ತಿಗೆ ಮುಂಗಾರು ಉತ್ತರ ಒಳನಾಡು ಪ್ರವೇಶಿಸುವ ಸಾಧ್ಯತೆ ಇದೆ, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಯದಗಿರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಸದ್ಯ ರಾಜ್ಯದಲ್ಲಿ ಸರಾಸರಿ 30 ಡಿಗ್ರಿ ಉಷ್ಣಾಂಶ ಪ್ರಮಾಣ ಇದ್ದು ಮುಂಗಾರು ಪ್ರವೇಶದಿಂದ ಕ್ರಮೇಣ ಧಗೆ ತಾಪಮಾನ ಇಳಿಕೆಯಾಗುವ ಸಂಭವವಿದೆ.

RELATED ARTICLES

Related Articles

TRENDING ARTICLES