Sunday, October 6, 2024

ಡಿಕೆಶಿ ಆರೋಪ ಸುಳ್ಳು: ಕರ್ನಾಟಕ ಸರ್ಕಾರ ಗುರಿಯಾಗಿಸಿ ಯಾವುದೇ ಯಾಗ ಆಚರಣೆ ನಡೆಸಿಲ್ಲ

ಕೇರಳ: ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ಒಳಗೊಂಡ ಶತ್ರು ಭೈರವಿ ‘ಯಾಗ’ ನಡೆಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಕಣ್ಣೂರಿನ ತಳಿಪರಂಬದಲ್ಲಿರುವ ಶಿವ ದೇವಾಲಯವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.

ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡಿರುವ ಶತ್ರು ಭೈರವಿ ಯಾಗ ನಡೆಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದರು. ತಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಟಮಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ನನ್ನ ಸಂಹಾರಕ್ಕೆ ನಡೆಯುತ್ತಿದೆ ಶತ್ರು ಭೈರವಿ ಯಾಗ: ಡಿಕೆ ಶಿವಕುಮಾರ್​

ಈ ಕುರಿತು ಮಲಬಾರ್ ದೇವಸ್ಥಾನ ಮಂಡಳಿ ಸಹಾಯಕ ಕಮಿಷನರ್ ಗಿರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂತಹ ಆರೋಪಗಳು ಆಧಾರರಹಿತವಾಗಿವೆ. ಈ ಪ್ರದೇಶದಲ್ಲಿ ಯಾವುದೇ ದೇವಾಲಯಗಳು ಅಕ್ರಮ ಆಚರಣೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES