Sunday, July 7, 2024

ಪ್ರೀತಿಯ ಬಿಳಿ ಮೊಮ್ಮಗನಿಗೆ ಜನ್ಮದಿನದ ಶುಭಾಷಯ ಕೋರಿದ ನಟ ಜಗ್ಗೇಶ್​

ನವರಸ ನಾಯಕ ಜಗ್ಗೇಶ್​ ತಮ್ಮ ಪ್ರೀತಿಯ ಮೊಮ್ಮಗನಿಗೆ ಜನ್ಮದಿನದ ಶುಭಾಷಯಗಳನ್ನು ಕೋರಿದ್ದಾರೆ. ತಮ್ಮ ಹಿರಿಯ ಪುತ್ರ ಗುರುರಾಜ್​ ಅವರ ಮಗ ಅರ್ಜುನ್​ ಇಂದು 9 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಶುಭಕೋರಿದ್ದಾರೆ.
ಈ ಕುರಿತ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಈ ಪೋಸ್ಟ್​​ನಲ್ಲಿ ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!! ಬಹಳ ಸಿಟ್ಟು ಬರುತ್ತಿತ್ತು ನನಗಾಗ, ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು ಯವ್ವನದಲ್ಲಿ..!! ನಟನಾದಮೇಲೆ ನನ್ನ maxfactor (ಲಂಡನ್) makeup ಅಂಬರೀಶ್ ರವರು ರಜನಿ ಯವರ, ವಿಜಯಕಾಂತ್, ಶಿವಣ್ಣ, ನಾನು ಬಳಸುತ್ತಿದ್ದ pancake ಇಂದು ವಿಶ್ವದಲ್ಲಿ ಮರೆಯಾದ pancake ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನು 50ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ.
ಅನೇಕರು ಕೇಳಿದರು ನಾ ನೀಡುವುದಿಲ್ಲಾ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗು ಭಕ್ತಿ ಹಾಗು ಎಲ್ಲು ಸಿಗದು..!! ಅದ ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ…ಇದ ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಇದ್ದಿದ್ದರೆ ಎನ್ನಿಸುತ್ತದೆ ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿ ಬಂದಿದ್ದಾನೆ ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ವರ್ಷಕ್ಕೆ ಕಾಲಿಟ್ಟಿದ್ದಾನೆ ಅಂದರೆ ಅವನ ಹುಟ್ಟುಹಬ್ಬ Many happy returns of the day ಕಂದ. ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES