Wednesday, July 3, 2024

ನಾಳೆ ಭವಾನಿ ರೇವಣ್ಣ ವಿಚಾರಣೆ: ಮನೆಯಿಂದಲೇ ವಿಚಾರಣೆ ನಡೆಸುವಂತೆ ಭವಾನಿ ಮನವಿ

ಬೆಂಗಳೂರು: ಪ್ರಜ್ವಲ್‌ ಬಂಧನ ಬೆನ್ನಲ್ಲೇ ಕೆ.ಆರ್‌.ನಗರ ಕಿಡ್ನ್ಯಾಪ್‌ ಕೇಸ್‌ನಲ್ಲಿ ಭವಾನಿ ರೇವಣ್ಣಕ್ಕೆ ಸಂಕಷ್ಟ ಎದುರಾಗಿದೆ. ಭವಾನಿ ಮೇಲೆ ಕೇಸ್‌ ದಾಖಲಾಗಿನಿಂದಾಗಲೂ ಎಲ್ಲಿಯೂ ಕಾಣಿಸದ ಭವಾನಿಗೆ ಎಸ್‌ಐಟಿಯಿಂದ 2ನೇ ನೋಟಿಸ್‌ ಜಾರಿ ಮಾಡಲಾಗಿದೆ.

ಈ ಹಿಂದೆ ನೀಡಿದ್ದ ನೋಟಿಸ್‌ಗೂ ಭವಾನಿ ಉತ್ತರ ನೀಡಿರಲಿಲ್ಲ. ಮೇ 15 ರಂದು ನೀಡಿದ್ದ ನೋಟಿಸ್‌ಗೆ ಹೊಳೆನರಸೀಪುರದ ಚನ್ನಂಬಿಕ ನಿವಾಸದಲ್ಲಿ ಸ್ಪಷ್ಪನೆ ನೀಡೋದಾಗಿ ಹೇಳಿದ್ದಿರಿ. ಆದರೆ ಈ ಪ್ರಕರಣದಲ್ಲಿ ನಿಮ್ಮನ್ನ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇದೆ. ಆದ್ದರಿಂದ ನೀವು ಜೂನ್‌ 1ರಂದು ಖುದ್ದು ಹಾಜರಿರಬೇಕೆಂದು SIT ನೋಟಿಸ್‌ನಲ್ಲಿ ಸೂಚಿಸಿದೆ.

ಇದನ್ನೂ ಓದಿ: ವಿದೇಶದಿಂದ ಬಂದ ಪ್ರಜ್ವಲ್​ನನ್ನ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ?

ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ನೀವೇ ಪತ್ರ ಬರೆದಿರುವ ಹಿನ್ನಲೆಯಲ್ಲಿ ತಾವಿರುವ ಜಾಗದಲ್ಲೇ ವಿಚಾರಣೆ ಮಾಡಲಾಗುವುದು, ಮಹಿಳಾ ಸಿಬ್ಬಂದಿಗಳ ಜೊತೆ ವಿಚಾರಣೆಗೆ ಹಾಜರಾಗುತ್ತಿದ್ದೇವೆ ಎಂದು ಎಸ್‌ಐಟಿ ನೊಟೀಸ್ ನಲ್ಲಿ ತಿಳಿಸಿದೆ. ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆ ಒಳೆಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭದಲ್ಲಿ ಖುದ್ದು ಮನೆಯಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ.

ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಇರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ವಿಚಾರಣೆ ನಡೆಸಲಾಗುವುದು, ಆದ್ದರಿಂದ ನೀವು ನೀಡಿದ ಹೊಳೆನರಸೀಪುರದ ವಿಳಾಸದಲ್ಲಿಯೇ ಇರಬೇಕು ಎಂದು ತಿಳಿಸಿರುವ ಎಸ್‌ಐಟಿ ನೊಟೀಸ್ ನಲ್ಲಿ ಸ್ಪಷ್ಟಪಡಿಸಿದೆ. ಪುತ್ರ ಪ್ರಜ್ವಲ್ ಬಂಧನವಾಗುತ್ತಿದ್ದಂತೆಯೇ ಪ್ರಕರಣದ ವೇಗ ಹೆಚ್ಚಿದ್ದು. ಇದೀಗ ಅವರ ತಾಯಿಯ ಹೇಳಿಕೆ ಪಡೆಯಲು ಎಸ್‌ಐಟಿ ಮುಂದಾಗಿದೆ.

RELATED ARTICLES

Related Articles

TRENDING ARTICLES