Wednesday, July 3, 2024

ವಿಧಾನಪರಿಷತ್​ ಚುನಾವಣೆ: ಇಂದು ನಾಳೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆ ಸಾಧ್ಯತೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಶತಕ ದಾಟಿದ್ದ ಆಕಾಂಕ್ಷಿಗಳ ಪಟ್ಟಿ ನಿನ್ನೆ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಜ್ಯ ನಾಯಕರು ಚರ್ಚೆ ನಡೆಸುವ ವೇಳೆಗೆ ಇಪ್ಪತ್ತಕ್ಕಿಂತ ಕಡಿಮೆಯಾಗಿದೆ.

ಈ ಪೈಕಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಖಚಿತ. ಉಳಿದಂತೆ ಸಚಿವ ಬೋಸರಾಜು ಸೇರಿದಂತೆ ಉಳಿದ ಎಲ್ಲರೂ ಪೈಪೋಟಿ ಎದುರಿಸಬೇಕಿದೆ. ಅಂತಿಮ ಹಂತದಲ್ಲಿರುವ ಸುಮಾರು 20 ಮಂದಿಯಲ್ಲಿ ಯಾರು ಬೇಕಾದರೂ ಸ್ಥಾನ ಗಿಟ್ಟಿಸಬಹುದು ಅಥವಾ ಯಾರಿಗೆ ಬೇಕಾದರೂ ಸ್ಥಾನ ತಪ್ಪಬಹುದು ಎಂಬಂತಹ ಸ್ಥಿತಿ ಇದೆ.

ಇದನ್ನೂ ಓದಿ: ಶಾಲ ಮಕ್ಕಳಿಗೆ ಸಿಹಿಸುದ್ದಿ: 8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ!

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿ ತಮ್ಮ ಮನಸ್ಸಿನಲ್ಲಿರುವ ಹೆಸರುಗಳನ್ನು ತಿಳಿಸಿದ್ದಾರೆ. ಇದರೊಂದಿಗೆ ಅಧಿಕೃತ ಪಟ್ಟಿಯನ್ನು ಇಂದು ಅಥವಾ ನಾಳೆಯೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

RELATED ARTICLES

Related Articles

TRENDING ARTICLES