Saturday, July 27, 2024

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬೆಂಗಳೂರಿನಲ್ಲಿ ನೂತನ ಕಚೇರಿ ಆರಂಭಿಸಿದ ಗೀತಂ ವಿವಿ!

ಬೆಂಗಳೂರು: ಪ್ರತಿಷ್ಠಿತ ಗೀತಂ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. 25 ಕ್ಕೂ ಹೆಚ್ಚು ಉದ್ಯಮ ಪಾಲುದಾರರ ಜೊತೆಗೆ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸಲು, ಅನ್ವೇಷಣೆ ಮತ್ತು ಪರಸ್ಪರ ಬೆಳವಣಿಗೆಯ ಪರಿಸರ ರೂಪಿಸಲು ಈ ಹೊಸ ಕಚೇರಿಯು ಗುರಿ ಹೊಂದಿದೆ.

ಈ ಕಚೇರಿಯೂ ಇಂದಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಾಗಿರುವ ನಿರಂತರ ಕಲಿಕೆ ಮತ್ತು ವೃತ್ತಿಪರ ಬೆಳವಣಿಗೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರಲ್ಲಿ ಎಕ್ಸಿಕ್ಯೂಟಿವ್ ಶೈಕ್ಷಣಿಕ ಕಾರ್ಯಕ್ರಮಗಳು, ಸಣ್ಣ ಅವಧಿಯ ಕೋರ್ಸ್‌ಗಳು ಮತ್ತು ಪ್ರಮಾಣೀಕರಣಗಳನ್ನು ಉದ್ಯಮದ ವೃತ್ತಿಪರರಿಗೆ ಒದಗಿಸಲಿದೆ.

ಗೀತಂನ ಸಂಶೋಧನೆ ಸಹಭಾಗಿತ್ವಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಜೊತೆಗಿನ ಸಹಭಾಗಿತ್ವವೂ ಸೇರಿದ್ದು, ಆಂಧ್ರ ಪ್ರದೇಶ ಮೆಡ್‌ಟೆಕ್ ಝನ್ (ಎಎಂಟಿಝಡ್), ಫೈಜರ್, ಇನ್‌ಫೋಸಿಸ್, ಮೈನಿ ಗ್ರೂಪ್, ಕೆಪಿಐಟಿ ಟೆಕ್ನಾಲಜೀಸ್, ಐಸಿಎಆರ್-ನಿವೇದಿ ಮತ್ತು ಇಂಡಿಜೀನ್ ಇತ್ಯಾದಿ ಸೇರಿವೆ. ಕೊವೆಂಟ್ರಿ ಯುನಿವರ್ಸಿಟಿ, ಮರೆಲ್ಲಿ ಇಂಡಿಯಾ, ಸಿಆರ್‌ಪಿಎಫ್, ಡೋಣವ್ಯೂಹ ಟೆಕ್ನಾಲಜಿ, ಭಾರತೀಯ ನೌಕಾಪಡೆ, ಸಿಎಸ್‌ಐಆ‌ರ್-ಐಐಸಿಟಿ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ಸಹಭಾಗಿತ್ವವನ್ನೂ ಹೊಂದಿದೆ.

ಇದನ್ನೂ ಓದಿ: ವಿಧಾನಪರಿಷತ್​ ಚುನಾವಣೆ: ಇಂದು ನಾಳೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆ ಸಾಧ್ಯತೆ

ಇತ್ತೀಚಿನ ವರ್ಷಗಳಲ್ಲಿ ಬೋಧನೆ ಮತ್ತು ಕಲಿಕೆ ವಿಶ್ವವಿದ್ಯಾಲಯಕ್ಕಿಂತಲೂ ಬೋಧನೆ, ಕಲಿಕೆ ಮತ್ತು ಸಂಶೋಧನೆ ವಿಶ್ವವಿದ್ಯಾಲಯವಾಗಿ ಗೀತಂ ಹೊರಹೊಮ್ಮಿದೆ. ಮಲ್ಟಿಡಿಸಿಪ್ಲಿನರಿ ಯುನಿಟ್ ಆಫ್ ರಿಸರ್ಚ್ ಆನ್ ಟ್ರಾನ್ಸ್‌ಲೇಶನಲ್ ಇನಿಶಿಯೇಟಿವ್ (ಎಂಯುಆರ್‌ಟಿಐ) ರಿಸರ್ಚ್ ಸೆಂಟ‌ರ್ ಅನ್ನು ಆರಂಭಿಸಿದ್ದು, ಸಂಚಾರ ತಂತ್ರಜ್ಞಾನ ಸಂವಹನ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಸೆನ್ಸರ್ ತಂತ್ರಜ್ಞಾನ, ಪ್ರಾಥಮಿಕ ವಿಜ್ಞಾನ
ಮತ್ತು ಸಾಮಗ್ರಿಗಳು ಮತ್ತು ಉತ್ಪಾದನೆ ವಿಭಾಗದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ.ಎನ್.ಎಸ್ ಆಚಾರ ಹೇಳಿದ್ದಾರೆ.

ಹೊಸ ಕಚೇರಿಯು ೧ನೇ ಮಹಡಿ, ಪ್ರೆಸ್ಟೀಜ್ ಟೆರೇಸಸ್, ಯುನಿಯನ್ ಸ್ಟ್ರೀಟ್, ಇನ್‌ಫ್ಯಾಂಟ್ರಿ ರೋಡ್, ಗಾಂಧಿ ನಗರ, ಬೆಂಗಳೂರಿನಲ್ಲಿದೆ. ಇದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಗಳಿಗೆ ಕೇಂದ್ರವಾಗಿ ಕೆಲಸ ಮಾಡಲಿದ್ದು ಹೆಚ್ಚಿನ ಜನರಿಗೆ ಇನ್ನಷ್ಟು ಸಂಪನ್ಮೂಲಗಳನ್ನು ಇದು ಒದಗಿಸಲಿದೆ.

RELATED ARTICLES

Related Articles

TRENDING ARTICLES