Sunday, October 6, 2024

ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಗೆ ಬ್ರೇಕ್: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಭಾವದಿಂದ ಕಂಗೆಟ್ಟಿದ್ದ ಜನಕ್ಕೆ ಪೂರ್ವ ಮುಂಗಾರು ತಂಪೆರೆದಿತ್ತು. ಕಳೆದ 15 ದಿನದಿಂದ ರಾಜ್ಯದಾದ್ಯಂತ ಅಬ್ಬರಿಸಿದ್ದ ವರುಣ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಡಿಕೆಶಿ ಬೇಡ ಅಂದ್ರೆ ಬೇರೆಯವರು ಅಧ್ಯಕ್ಷರಾಗಬಹುದು : ರಾಮಲಿಂಗಾರೆಡ್ಡಿ

ಮತ್ತೆ ಜೂನ್ ಮೊದಲ ವಾರದ ಬಳಿಕ ಮುಂಗಾರು ಎಂಟ್ರಿಯಾಗಿ ಅಬ್ಬರಿಸುವ ಸಾಧ್ಯತೆ ಇದೆ. ಸದ್ಯ ಇಂದಿನಿಂದ ಮೇ 30ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಬೀಳವ ಸಾಧ್ಯತೆ ಕಡಿಮೆ ಇದೆ. ಅತ್ತ ಕರಾವಳಿ ಭಾಗಕ್ಕೆ ಮಾತ್ರ ಯಲ್ಲೋ ಅಲರ್ಟ್ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಮೋಡ ಕವಿದ ವಾತಾವರಣ ಮತ್ತು ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.

ಜೂನ್1 ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಈ ಭಾರೀ ಉತ್ತಮ ಮುಂಗಾರಿನ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಸೂಚನೆ ನೀಡಿದೆ.

RELATED ARTICLES

Related Articles

TRENDING ARTICLES