Monday, July 1, 2024

Prajwal Pendrive Case: ತನಿಖೆಯ ಹಂತದಲ್ಲಿ ಯಾರದ್ದೋ ಹೆಸರು ಹೇಳಲಾಗದು: ಸಚಿವ ಜಿ.ಪರಮೇಶ್ವರ್​

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​​ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​ ಸಂಬಂಧ ಗೃಹ ಸಚಿವ ಪರಮೇಶ್ವರ್​ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಹಂತದಲ್ಲಿ ಯಾರಾದೋ ಹೆಸರು ಹೇಳೊದು ಅಲ್ಲ. ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯೋದು ಸರಿಯಲ್ಲ. ತನಿಖೆ ಅದ ಮೇಲೆ‌‌ ನಿರ್ದಿಷ್ಟವಾಗಿ ಹೇಳಬಹದು. ತನಿಖೆ ಮೊದಲೇ ಹೆಸರು ಹೇಳೊದು ಸರಿಯಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಪೊಲೀಸರ ತಲೆ ಕಡೀತೇವೆ ಅಂದ್ರೆ ಸುಮ್ಮನಿರಲ್ಲ: ಗೃಹಸಚಿವ ಪರಮೇಶ್ವರ್​

ಸಂತ್ರಸ್ತೆಯರಿಗೆ ಸೂಕ್ತ ರಕ್ಷಣೆ ಕೊಡ್ತಿದ್ದೇವೆ:

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಹಾಸನ ಸಂತ್ರಸ್ತೆಯರನ್ನ ಭೇಟಿ ಮಾಡಿ ಸ್ವಾಂತನ ಹೇಳಲಿಲ್ಲ ಎಂದು ಪ್ರಗತಿಪರ ಸಾಹಿತಿಗಾರರು ಅಸಮಾಧಾನ ಹೊರಹಾಕಿದ ವಿಚಾರ ಕುರಿತು ಗೃಹ ಸಚಿವ ಪರಮೇಶ್ವರ್​ ಪ್ರತಿಕ್ರಿಯಿಸಿದ ಅವರು, ಸಂತ್ರಸ್ತರಿಗೆ ಎಲ್ಲಾ ರೀತಿಯ ಸೆಕ್ಯೂರಿಟಿ ಕೊಡ್ತೀವೆಂದು ಹೇಳಿದ್ದೇವೆ. ಸಂತ್ರಸ್ತೆಯರನ್ನ ಯಾರು ಒತ್ತಾಯ ಮಾಡಿ ಬೇರೆ ಬೇರೆ ರೀತಿಯಲ್ಲಿ ನಡೆಸಿಕೊಂಡಿಲ್ಲ. ಯಾವ ಸಂತ್ರಸ್ತೆಗೂ ತೊಂದರೆ ಆಗಬಾರದೆಂದು ಹಾಸನ ಜಿಲ್ಲೆ ಎಸ್ಪಿಗೆ, ಐಜಿಗೆ ತಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ:

ವಿದೇಶಾಂಗ ಸಚಿವ ಜೈ ಶಂಕರ್​​ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ​​ನಮಗೆ ಯಾವುದೇ ಪತ್ರ ಆಗಲಿ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡುತ್ತಾ ಇದ್ದೀನಿ ಅಷ್ಟೇ. ಲಿಖಿತ ಮೂಲಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮವರು ಪತ್ರ ಬರೆದಿದ್ದಾರೆ. ಸಿಎಂ ಮೇ1 ನೇ ತಾರೀಖಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮೇ 21ನೇ ತಾರೀಖು ಎರಡನೇ ಪತ್ರ ಬರೆಯುತ್ತಾರೆ. ಒಂದನೇ ತಾರೀಖು ಪತ್ರ ಎಲ್ಲಿ ಹೋಯ್ತು? ಪ್ರಧಾನಿ ಮಂತ್ರಿಗಳ ಕಚೇರಿಗೆ ಸಿಎಂ ಪತ್ರ ಹೋದ್ರೆ. ಅದಕ್ಕೆ ಗೌರವ ಸಿಗಬೇಕಲ್ವಾ? ವಿದೇಶಾಂಗ ಸಚಿವರು ಮೇ 21 ನೇ ತಾರೀಖು ಪತ್ರ ಬಂದಿದೆ ಅಂತಾರೆ. ಹಾಗಾದರೇ ಮೊದಲನೇ ಪತ್ರ ಎಲ್ಲಿ ಹೋಯ್ತು.? ಕ್ರಮ ತೆಗೆದುಕೊಳ್ತಾ ಇದ್ದರೆ ಒಳ್ಳೆದು. ಅದರೆ ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES