Monday, July 1, 2024

ಪೆನ್​ಡ್ರೈವ್​ ಪ್ರಕರಣ: ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಬೇಕು: ರಾಬರ್ಟ್​ ವಾದ್ರಾ

ದೆಹಲಿ: ಹಾಸನ ಸಂಸದ ಪ್ರಜ್ವಲ್​​ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ರಾಬರ್ಟ್​ ವಾದ್ರಾ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಪವರ್​ ಟಿವಿ ಜೊತೆ ಮಾತನಾಡಿದ ಅವರು, ತಕ್ಷಣವೇ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಬೇಕು. ಆದಷ್ಟು ಬೇಗ ಜರ್ಮನಿಗೆ ವಿಶೇಷ ತಂಡ ಕಳಿಸಿ ವಾಪಸ್ ಕರೆ ತರಬೇಕು. ಕೆನಡಾಗೆ ಕಳಿಸಿ ಕರೆದುಕೊಂಡು ಬರಲು ಆಗುತ್ತದೆ. ಈ ಪ್ರಕರಣದಲ್ಲಿ ಯಾಕೆ ಸರ್ಕಾರ ಮನಸ್ಸು ಮಾಡ್ತಿಲ್ಲ ಎಂದು ಆರೋಪಿಸಿದರು.

ಸಂತ್ರಸ್ತ ಮಹಿಳೆಯರಿಗೆ ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಬೇಕು. ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದ್ರೆ ಪಾಸ್ ಪೋರ್ಟ್ ರದ್ದು ಮಾಡುವುದು ಸುಲಭ ಎಂದಿದ್ದಾರೆ.

ಇದನ್ನೂ ಓದಿ: ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ಧಿರಾ?:ಸಿಎಂ ಸಿದ್ದರಾಮಯ್ಯ ವಿರುದ್ಧ HDK ವಾಗ್ದಾಳಿ

ದೇಶದಲ್ಲಿ ಬದಲಾವಣೆ ಅವಶ್ಯಕತೆ ಇದೆ:

ಮೊದಲ ಬಾರಿಗೆ ನನ್ನ ಮಗಳು ಮತದಾನ ಮಾಡಿದ್ದಾಳೆ. ಈ ಸಲ ಮತದಾನ ಮಾಡಲು ಇದ್ದ ಮುಖ್ಯ ಉದ್ದೇಶ ಬೆಲೆ ಏರಿಕೆ. ಹಾಗಾಗಿ, ದೇಶದಲ್ಲಿ ಬದಲಾವಣೆ ಅವಶ್ಯಕತೆ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಹಿಳೆ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಪ್ರತಿಯೊಬ್ಬರಿಗೆ ಉಪಯೋಗವಾಗಿದೆ. ಮೋದಿ ಗ್ಯಾರಂಟಿ ಕೇವಲ ಉಳ್ಳವರಿಗೆ ಮಾತ್ರ. ಮೋದಿ ಸರ್ಕಾರ ಈ ಸಲ ಅಧಿಕಾರಕ್ಕೆ ಬರಲ್ಲ. ರಾಹುಲ್ ಗಾಂಧಿ 2019 ಮತ್ತು 2014ರಲ್ಲಿ ಜನರ ಜೊತೆ ಗುರುತಿಸಿಕೊಂಡು ಸಮಸ್ಯೆ ಆಲಿಸಿದ್ದಾರೆ. ಬಡವರ ಸಮಸ್ಯೆಗಳನ್ನು ಪರಿಹರಿಸಲು ಇಂಡಿಯಾ ಒಕ್ಕೂಟದ ಸರ್ಕಾರದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

RELATED ARTICLES

Related Articles

TRENDING ARTICLES