Monday, July 1, 2024

ಅಶ್ಲೀಲ ವಿಡೀಯೊ ಪ್ರಕರಣ: ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್​​ಗೆ ಶೋಕಾಸ್​ ನೋಟಿಸ್

ದೆಹಲಿ: ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಪ್ರಕರಣದಲ್ಲಿ ಸಿಲುಕಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಮೊದಲ ಬಾರಿ ಬಿಗ್ ಶಾಕ್ ಕೊಟ್ಟಿದೆ.

ಪ್ರಜ್ವಲ್ ರೇವಣ್ಣ ಅವರ ಪಾಸ್​ಪೋರ್ಟ್ ರದ್ದುಗೊಳಿಸುವಂತೆ SIT ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಬೆನ್ನಲೇ ಇದೀಗ ವಿದೇಶಾಂಗ ಸಚಿವಾಲಯವು, ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶೀಘ್ರದಲ್ಲೇ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ. ಇದರಿಂದ ಪ್ರಜ್ವಲ್​​ಗೆ ಹಂತ ಹಂತವಾಗಿ ಸಂಕಷ್ಟು ಶುರುವಾದಂತಾಗಿದೆ. ಪ್ರಜ್ವಲ್​ ಉತ್ತರಿಸದಿದ್ರೆ ಪ್ರಜ್ವಲ್​ ಪ್ರಯಾಣದ ಮೇಲೆ ನಿರ್ಬಂಧ ಹೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ

ಹಾಸನದಲ್ಲಿ ಲೋಕಸಭಾ ಚುನಾವಣೆ ಮತದಾನದ ಬಳಿಕ ವಿದೇಶಕ್ಕೆ ಹಾರಿದ ಸಂಸದ ಪ್ರಜ್ವಲ್​ ರೇವಣ್ಣ ಕಳೆದ 28 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ದೇಶಕ್ಕೆ ವಾಪಾಸ್​ ಆಗಿ SIT ತನಿಖೆಗೆ ಸಹಕರಿಸುವಂತೆ ಮಾಜಿ ಮಾಜಿ ಪ್ರಧಾನಿ ದೇವೇಗೌಡ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದರೂ ಇದುವರೆಗೂ ಯಾವುದಕ್ಕೂ ಪ್ರತಿಕ್ರಿಯೆ ನೀಡದ ಪ್ರಜ್ವಲ್​ ನನ್ನು ವಶಕ್ಕೆ ಪಡೆಯುವ ಸಲುವಾಗಿ ಭಾರತದ ವಿದೇಶಾಂಗ ಸಚಿವಾಲು ಶೋಕಾಸ್​ ನೀಡಿದೆ.

RELATED ARTICLES

Related Articles

TRENDING ARTICLES