Wednesday, July 3, 2024

ಅಂತ್ಯಸಂಸ್ಕಾರ ವೇಳೆ ಕಣ್ಣುಬಿಟ್ಟ ಮೃತ ಬಾಲಕ: ಇದು ಮುರ್ತಜಾ ಖಾದ್ರಿ ಪವಾಡ ಎಂದ ಪೋಷಕರು

ಬಾಗಲಕೋಟೆ: ಖಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಮಗುವು ಅಂತ್ಯಸಂಸ್ಕಾರ ವೇಳೆ ಧಿಢೀರ್​ ಕಣ್ಣುಬಿಟ್ಟು ಪವಾಡ ಸದೃಷ್ಯವಾಗಿ ಬದುಕಿ ಬಂದ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್​ ನಗರದಲ್ಲಿ ನಡೆದಿದೆ.

ಒಂದು ವರ್ಷದ ದ್ಯಾಮಣ್ಣ ಭಜಂತ್ರಿ ಎಂಬ ಮಗುವಿಗೆ ಉಸಿರಾಟ ತೊಂದರೆ, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು. ಹುಟ್ಟಿದಾಗಿನಿಂದ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ಈ ವೇಳೆ ವೈದ್ಯರು ಮಗು ಬದುಕೋದು ಕಷ್ಟ ಎಂದು ಹೇಳಿ ಡಿಸ್ಜಾರ್ಜ್‌ ಮಾಡಿದ್ದಾರೆ. ವಾಪಸ್ ವಾಹನದಲ್ಲಿ ಮನೆಗೆ ಬರುವಾಗ ಮಗು ಪ್ರಜ್ಞೆ ತಪ್ಪಿದೆ. ಪ್ರಜ್ಞೆ ತಪ್ಪಿದ ಮಗುವನ್ನು ಮೃತಪಟ್ಟಿದೆ ಎಂದು ಭಾವಿಸಿದ ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿ, ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‌ ಫೈಟ್: ಎರಡು ಗುಂಪುಗಳ ನಡುವೆ ಘರ್ಷಣೆ, 10 ಜನರ ಬಂಧನ!

ಇತ್ತ ಮಗು ಸಾವಿನ ಸುದ್ದಿ ತಿಳಿದು ಬಂಧು ಬಳಗದವರು ಮನೆಗೆ ಬಂದಿದ್ದಾರೆ. ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುತ್ತಿರುವಾಗಲೇ ಮಗು ಕೆಮ್ಮಿದೆ ಈ ಮೂಲಕ ಬದುಕಿದೆ ಎಂದು ಅಚ್ಚರಿಗೊಂಡಿದ್ದಾರೆ. ಇದು ಮುರ್ತುಜಾ ಖಾದ್ರಿ ಪವಾಡ ಎಂದು ತಿಳಿದ ಪೋಷಕರು ಅಂತ್ಯಸಂಸ್ಕಾರದ ಜಾಗದಿಂದ ದರ್ಗಾಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿಂದ ಕೂಡಲೇ ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

RELATED ARTICLES

Related Articles

TRENDING ARTICLES