Monday, July 1, 2024

ಹಾಸನ ವೀಡಿಯೋಗಳು ಅಸಲಿಯೋ ನಕಲಿಯೋ ಎಂಬ ಅನುಮಾನವಿದೆ: ಕುಮಾರಸ್ವಾಮಿ

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಒಳಗೆ ಇರುವ ವೀಡಿಯೋ ಹಾಗೂ ಫೋಟೋಗಳು ಅಸಲಿಯಾ? ನಕಲಿಯಾ? ಅನ್ನೋದು ಗೊತ್ತಾಗಬೇಕಿದೆ. ಚುನಾವಣೆಗಾಗಿ ಈ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಇರುವವರು ಅವರೇನಾ ಅಥವಾ ಬೇರೆ ಅವರ ಫೋಟೋ ಅಂಟಿಸಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಅನುಮಾನ ಹೊರಹಾಕಿದ್ದಾರೆ.
ಎಲ್ಲಾ ಮಾಹಿತಿ ನನ್ನ ಬಳಿ ಇದೆ. ಅವರ ಅಕ್ಕ-ಪಕ್ಕ ಇದ್ದವರೇ ಮಾಹಿತಿ ನೀಡಿದ್ದಾರೆ. ಅವರ ಬಳಿ ಇರುವವರು ನಮ್ಮ ಅಭಿಮಾನಿಗಳಿದ್ದಾರೆ. ಫೋನ್ ಟ್ಯಾಪಿಂಗ್ ಅನುಮಾನ ಅಲ್ಲ ಅದು ಪಕ್ಕಾ ಮಾಹಿತಿ ಎಂದು ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಅವರೇ ನಿಮ್ಮ ಅಧಿಕಾರ ಶಾಶ್ವತ ಅಲ್ಲ:
ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದ ಅವರು ಕುಮಾರಸ್ವಾಮಿ, ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದಿದ್ದಾರೆ. ಈಗ 8 ಜನ ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ. ಯಾವ ಕಾರಣಕ್ಕೆ ಕಾರ್ತಿಕ್‌ನ ಇನ್ನು ಬಂಧಿಸಿಲ್ಲ, ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನು, ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು.‌ ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ನೀವು ಹೇಳ್ತಿರಾ ಎಂದಿದ್ದಾರೆ. ಇನ್ನು, ಮೈತ್ರಿಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಯಾರಪ್ಪನ ಆಸ್ತಿ ಅಲ್ಲ:
ರಾಜಕೀಯ ಯಾರಪ್ಪನ ಆಸ್ತಿ ಅಲ್ಲ, ಇದರಲ್ಲಿ ಅಸೂಯೆ ಪಡುವುದು ಏನಿದೆ ಎಂದ್ರು. ಅಧಿಕಾರವನ್ನ ನಾವು ನೋಡಿ ಆಗಿದೆ, ಇದನ್ನ ಸಿಡಿ ಶಿವಕುಮಾರ್ ಅವರಿಗೆ ನಾನು ಹೇಳುತ್ತೇನೆ ಎಂದಿದ್ದಾರೆ.
3ನೇ ಬಾರಿಗೆ ಪ್ರಜ್ವಲ್‌ಗೆ ಹೆಚ್‌ಡಿಕೆ ಡೆಡ್‌ಲೈನ್:
ಆರೋಪಿ ಪ್ರಜ್ವಲ್ ರೇವಣ್ಣನ ಮೇಲೆ ಸಾಲು ಸಾಲು ಕೇಸ್ ದಾಖಲಾಗಿದ್ದು, ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದಾನೆ. ಸದ್ಯ, ಮೂರನೇ ಬಾರಿಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರಜ್ವಲ್‌ಗೆ ಡೆಡ್‌ಲೈನ್​ ನೀಡಿದ್ದಾರೆ.​ ಪ್ರಜ್ವಲ್​ಗೆ ಮತ್ತೊಮ್ಮೆ ಮನವಿ ಮಾಡಿರುವ ಹೆಚ್​ಡಿಕೆ, ಈಗಲೂ ವಿಚಾರಣೆ ಎದುರಿಸುವಂತೆ ಹೇಳುತ್ತಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.

ವಿಡಿಯೋ ಹಂಚಿದವರಿಗೆ ಶಿಕ್ಷೆ ಕೊಡಿಸಬೇಕಲ್ವಾ:
ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ ವಿಡಿಯೋ ಹಂಚಿದವರಿಗೆ ಶಿಕ್ಷೆ ಕೊಡಿಸಬೇಕಲ್ವಾ. ಪೆನ್​ಡ್ರೈವ್ ಹಂಚಿದ್ದು ಅಪರಾಧ ಅಲ್ವಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿರುವ ಮಹಿಳೆಯರ ಪರಿಸ್ಥಿತಿ ಏನಾಗಬೇಡ? ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಬೇಕು ಅಲ್ವಾ ಎಂದ್ರು. ನೀವು SITಯಿಂದ ತನಿಖೆಯನ್ನ ಮಾಡಿಸುತ್ತಿದ್ದೀರಲ್ಲ. ಯಾವ ಆಧಾರದ ಮೇಲೆ ಸಿಕ್ಕಸಿಕ್ಕವರನ್ನ ಬಂಧಿಸ್ತಿದ್ದೀರ? ಅವರ ಬೆಳವಣಿಗೆ ನೋಡಿ ಸಹಿಸಲು ಆಗ್ತಿಲ್ಲ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES