Monday, July 1, 2024

ಪ್ರಜ್ವಲ್​ ಎಲ್ಲಿದ್ದರೂ ಬಂದ್ಬಿಡಪ್ಪ: ಕುಮಾರಸ್ವಾಮಿ ಮನವಿ

ಬೆಂಗಳೂರು: ಎಷ್ಟು ದಿನ ಈ ಕಳ್ಳಾ ಪೊಲೀಸ್​ ಆಟ? ದೇಶಕ್ಕೆ ವಾಪಾಸ್​ ಬಂದು ತನಿಖೆಗೆ ಸಹಕರಿಸು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣಗೆ ಮನವಿ ಮಾಡಿಕೊಂಡರು.

ಪೆನ್​ಡ್ರೈವ್​ ಪ್ರಕರಣ ಮಾದ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ರಾತ್ರೋರಾತ್ರಿ ವಿದೇಶಕ್ಕೆ ಹಾರಿರುವ ಸಂಸದ ಪ್ರಜ್ವಲ್​ ನಿಂದ ಮಾಜಿ ಪ್ರಧಾನಿ ಕುಟುಂಬ ಮತ್ತು ಜೆಡಿಎಸ್​ ಪಕ್ಷಕ್ಕೆ ಬಾರಿ ಮುಜುಗರ ಉಂಟಾಗಿರುವ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರು.

ಎಲ್ಲೇ ಇದ್ದರೂ ದೇಶಕ್ಕೆ ವಾಪಾಸ್​ ಬಂದು ವಿಶೇಷ ತನಿಖಾ ತಂಡಕ್ಕೆ (SIT) ಸಹಕರಿಸು, ಎಷ್ಟು ದಿನಾ ಅಂತ ಕಳ್ಳ ಪೊಲೀಸ್​ ಆಟ, ಆಮೇಲೆ ತೀರ್ಮಾನ ಆಗಲಿ ನಮ್ಮ ತಂದೆಯ ಪರವಾಗಿ ನಾನೇ ಹೇಳ್ತಿದ್ದೇನೆ. ವಾಪಾಸ್ ಬಂದು ದೇವೇಗೌಡ ಅವರಿಗೆ ಗೌರವ ಕೊಡು, ನಿನಗೆ ಕೈ ಮುಗಿದು ಮನವಿ ಮಾಡ್ತೀನಿ ಎಂದು ಮಾದ್ಯಮಗಳ ಮೂಲಕ ಮನವಿ ಮಾಡಿಕೊಂಡರು.​

ಇದನ್ನು ಓದಿ: ಬಂಧನದ ಭೀತಿ: ಜರ್ಮನಿಯಿಂದ ಲಂಡನ್​ಗೆ ಪರಾರಿಯಾದ ಪ್ರಜ್ವಲ್​

​​ಪೆನ್​ಡ್ರೈವ್ ಕೇಸ್​​ ಕರ್ತೃಗಳನ್ನು ನೇಣಿಗೆ ಹಾಕಿ:

ಸಂಸದ ಪ್ರಜ್ವಲ್​​ ರೇವಣ್ಣ ವಿರುದ್ಧದ ಪೆನ್​ಡ್ರೈವ್​​ ಪ್ರಕರಣದ ಕರ್ತೃಗಳನ್ನು ಹ್ಯಾಂಗ್​ ಮಾಡಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪೆನ್​ಡ್ರೈವ್ ಬಂದ ಮೇಲೆ ದೂರು ಕೊಟ್ಟವರ ಮೇಲೆ ಯಾವ ಕ್ರಮಕೈಗೊಂಡ್ರಿ. ಯಾರು ಯಾರಿಗೆ ಚಿತ್ರಹಿಂಸೆ ಕೊಟ್ಟು ಹೇಳಿಕೆ ಹೇಳುಸುತ್ತಿದ್ದೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ರು.

ದ್ವೇಷ ತೀರಿಸಲು ನೀವು ಹೊರಟಿದ್ದಿರಾ?

ದೇವರಾಜೇಗೌಡರ ವಿರುದ್ದ ದೂರು‌ ಕೊಡಲು ಮಹಿಳೆಗೆ ಎಷ್ಟು ಕೊಟ್ಟರು? ಎಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಹಿರಿಯೂರಿನಲ್ಲಿ ಅರೆಸ್ಟ್ ಮಾಡಿ ತಂದು 376 ಸೆಕ್ಷನ್ ಹಾಕಿದರು. ಸಿಡಿ ಶಿವು ಹೆಣ್ಣು ಮಗಳನ್ನು ಬೆಂಗಳೂರಿಗೆ ಕರೆ ತಂದು, ದೂರನ್ನು ಕೊಡಿಸಿದರು. ಡಿಜಿ ಅಲೋಕ್ ಮೋಹನ್​​ರನ್ನು ಬೆಂಗಳೂರು ಪೊಲೀಸ್ ಕಮೀಷನರ್ ಮಾಡಿಲ್ಲ. ಹೀಗಂತ ನಮ್ಮ ಕುಟುಂಬದ ವಿರುದ್ದ ದ್ವೇಷ ತೀರಿಸಲು ನೀವು ಹೊರಟಿದ್ದಿರಾ? ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES