ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ವಿರುದ್ದ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿ ಆದೇಶಿಸಿದೆ.
ಅಶ್ಲೀಲ ವೀಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಹಲವು ಬಾರಿ ನೋಟೀಸ್ ನೀಡಿದ್ದರು ವಿಚಾರಣೆಗೆ ಹಾಜರಾಗಿಲ್ಲ ಎಂಬ SIT ಮನವಿಯನ್ನು ಪುರಸ್ಕರಿಸಿದ 42ನೇ ಎಸಿಎಂಎಂ ನ್ಯಾಯಾಲಯವು ಅರೆಸ್ಟ್ ವಾರಂಟ್ ಜಾರಿಮಾಡಿದೆ.
ಇದನ್ನೂ ಓದಿ: ಪ್ರಜ್ವಲ್ ರಾಸಲೀಲೆ ವೀಡಿಯೋಗಳ ಪೆನ್ಡ್ರೈವ್ ಮಾರಾಟ ಮಾಡಿದ್ದು ದೇವರಾಜೇಗೌಡ: ಶಿವರಾಮೇಗೌಡ
ಈ ಕುರಿತು ವಿವರಣೆ ನೀಡಿರುವ ನ್ಯಾಯಾಲಯವು ವಿದೇಶದಲ್ಲಿರುವ ಆರೋಪಿಯ ವಿರುದ್ದ ಏಕಾಏಕಿ ರೆಡ್ಕಾರ್ನರ್ ನೋಟೀಸ್ ನೀಡಲು ಸಾಧ್ಯವಿಲ್ಲ. ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಚಾರ್ಜ್ಶೀಟ್ ಮುಖ್ಯ, ಆರೋಪಿ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿರಲೇಬೇಕು ಎಂದು ಅಭಿಪ್ರಾಯ ಪಟ್ಟಿದೆ.
ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆದ ಮರುದಿನವೇ ಏ.27ರಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಇವರ ವಿರುದ್ದ ಸಂತ್ರಸ್ಥೆಯರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇದೀಗ ನ್ಯಾಯಾಲಯ ನೀಡಿರುವ ವಾರಂಟ್ ಆದೇಶದ ಹಿನ್ನೆಲೆ ಪ್ರಜ್ವಲ್ ರೇವಣ್ಣ ವಿದೇಶದಿಂದ ದೇಶಕ್ಕೆ ವಾಪಾಸ್ಸಾಗುತ್ತಿದ್ದಂತೆ ಬಂಧನ ಮಾಡುವ ಸಾಧ್ಯತೆ ಇದೆ.