Wednesday, June 26, 2024

ಕೋರ್ಟ್​ನಲ್ಲೂ ಪ್ರತಿಧ್ವನಿಸಿದ ‘ಪವರ್’ ವರದಿ : ಮೇ 20ಕ್ಕೆ ರೇವಣ್ಣ ಜಾಮೀನು ತೀರ್ಪು

ಬೆಂಗಳೂರು : ಹೊಳೆನರಸೀಪುರ ಶಾಸಕ ಹೆಚ್​.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್​ಐಟಿ SPP ಜಯ್ನಾ ಕೊಠಾರಿ ಅವರು, ಸಂತ್ರಸ್ತ ಮಹಿಳೆಯು ಪವರ್​​ ಟಿವಿಗೆ ನೀಡಿದ ಸಂದರ್ಶನವನ್ನು ಪ್ರಸ್ತಾಪಿಸಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ FIR ಪ್ರತಿ ಓದಿದ ಜಯ್ನಾ ಕೊಠಾರಿ, ಪವರ್ ಟಿವಿ ಸಂದರ್ಶನದಲ್ಲಿ ಸಂತ್ರಸ್ತ ಮಹಿಳೆ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿಸ್ತೃತವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧಾರದ ಮೇಲೆ FIR ದಾಖಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇನ್ನೂ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಸಕ ಹೆಚ್.ಡಿ. ರೇವಣ್ಣಗೆ ಜಾಮೀನು ಟೆನ್ಶನ್ ಮುಂದುವರೆದಿದೆ. ರೇವಣ್ಣ ಜಾಮೀನು ಅರ್ಜಿ ಸಂಬಂಧ ಸುದೀರ್ಘ ಎರಡೂವರೆ ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿದ ಬೆಂಗಳೂರಿನ 42ನೇ ​ACMM ನ್ಯಾಯಾಲಯವು, ತೀರ್ಪನ್ನು ಮೇ 20ರಕ್ಕೆ ಕಾಯ್ದಿರಿಸಿದೆ.

ಮಧ್ಯಂತರ ಜಾಮೀನು ವಿಸ್ತರಣೆ

ಕಳೆದ ಎರಡು ದಿನಗಳಿಂದ SIT ಹಾಗೂ ರೇವಣ್ಣ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ್ದು, ಇದೀಗ ಅಂತಿಮವಾಗಿ ನ್ಯಾಯಾಲಯ ರೇವಣ್ಣರ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಇದರೊಂದಿಗೆ ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆಯಾಗಿದೆ. ಮೇ 20ಕ್ಕೆ ಜಾಮೀನು ಆದೇಶ ಕಾಯ್ದಿರಿಸಿದ್ದರಿಂದ ರೇವಣ್ಣ, ಜಾಮೀನು ಸಿಗುತ್ತೋ? ಇಲ್ವೋ? ಎನ್ನುವ ಟೆನ್ಷನ್​ನಲ್ಲಿಯೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ದೂರುದಾರರಿಗೆ ಕಿರುಕುಳ ಸಾಧ್ಯತೆ

ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಇಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸೆಕ್ಷನ್ 41ರ ಪ್ರಕಾರ ವಿಚಾರಣೆ ನಡೆಸಿದಾಗ ಯಾವುದೇ ಉತ್ತರ ನೀಡಿಲ್ಲ ಎಂದು ಎಸ್​​ಐಟಿ SPP ಜಯ್ನಾ ಕೊಠಾರಿ ವಾದ ಮಂಡಿಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಕಾರಣದಿಂದಲೇ ಸೆಕ್ಷನ್​ 376 ಸೇರ್ಪಡೆ ಆಗಿದೆ. ದೂರದಾರರಿಗೆ ರೇವಣ್ಣ, ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ್ದಾರೆ. CRPC ಸೆಕ್ಷನ್ 436ನಡಿ ರೇವಣ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆದ್ರೆ, ಸೆಕ್ಷನ್ 436ನಡಿ ಜಾಮೀನು ನೀಡಲು ಸಾಧ್ಯವಿಲ್ಲ. ಜಾಮೀನು ನೀಡಿದ್ರೆ ಸಾಕ್ಷಿದಾರರು ಮುಂದೆ ಬರಲ್ಲ ಎಂದು ಖಡಕ್​ ವಾದ ಮಂಡಿಸಿದ್ದಾರೆ.

RELATED ARTICLES

Related Articles

TRENDING ARTICLES