Sunday, October 6, 2024

RRಗೆ ಪಂಜಾಬ್ ಸವಾಲ್ : PBKSಗೆ ಗೆಲುವು ಅನಿವಾರ್ಯ, RRಗೆ ಔಪಚಾರಿಕ ಪಂದ್ಯ

ಬೆಂಗಳೂರು : ಐಪಿಎಲ್​ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಆರ್​ಆರ್​ಗೆ ಇದು ಔಪಚಾರಿಕ ಪಂದ್ಯವಾದರೆ, ಪಂಜಾಬ್​ಗೆ ಗೆಲುವು ಅನಿವಾರ್ಯವಾಗಿದೆ.

ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ 65ನೇ ಪಂದ್ಯ ನಡೆಯುತ್ತಿದೆ. ಸತತ ಮೂರು ಪಂದ್ಯಗಳಲ್ಲಿ ಸೋತರೂ ರಾಜಸ್ಥಾನ ಈಗಾಗಲೇ ಪ್ಲೇಆಫ್​ ಪ್ರವೇಶಿಸಿದೆ.

ನಿನ್ನೆ (ಮೇ14) ಡೆಲ್ಲಿ ಕ್ಯಾಪಿಟಲ್ಸ್​ ಎದುರು ಲಕ್ನೋ ಸೂಪರ್​ ಜೈಂಟ್ಸ್​​ ಸೋತಿದ್ದರಿಂದ ರಾಜಸ್ಥಾನ್ ತಂಡಕ್ಕೆ ಅದೃಷ್ಟ ಒಲಿದಿದೆ. RRಗೆ ಗುಂಪು ಹಂತದಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿಯಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಆರ್​ಆರ್​ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಹಾಗೂ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಂಜಾಬ್​ ಕಿಂಗ್ಸ್​ ಆಡಿರುವ 12 ಪಂದ್ಯಗಳಲ್ಲಿ 4 ಗೆಲುವು ಹಾಗೂ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆರ್​ಆರ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪಂಜಾಬ್​ 8 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನಾದರೂ ಗೆದ್ದು ಕೊನೆಯ ಸ್ಥಾನದಿಂದ ಮೇಲೇಳಲು ಸಜ್ಜಾಗಿದೆ.

ರಾಜಸ್ಥಾನ್ vs ಪಂಜಾಬ್ ಬಲಾಬಲ

  • ಒಟ್ಟು ಪಂದ್ಯ : 27
  • ರಾಜಸ್ಥಾನ್‌ ರಾಯಲ್ಸ್‌ : 16 ಗೆಲುವು
  • ಪಂಜಾಬ್‌ ಕಿಂಗ್ಸ್‌ : 11 ಗೆಲುವು

ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂ (ಜೈಪುರ)

  • ಒಟ್ಟು ಪಂದ್ಯ : 6
  • ರಾಜಸ್ಥಾನ್‌ ರಾಯಲ್ಸ್‌ : 5 ಗೆಲುವು
  • ಪಂಜಾಬ್‌ ಕಿಂಗ್ಸ್‌ : 1 ಗೆಲುವು

PCA ಸ್ಟೇಡಿಯಂ (ಮೊಹಲಿ)

  • ಒಟ್ಟು ಪಂದ್ಯ : 7
  • ರಾಜಸ್ಥಾನ್‌ ರಾಯಲ್ಸ್‌ : 3 ಗೆಲುವು
  • ಪಂಜಾಬ್‌ ಕಿಂಗ್ಸ್‌ : 4 ಗೆಲುವು

ಹೇಗಿದೆ ಪಿಚ್‌..?

  • ಬರ್ಸಾಪರ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ
  • ಬೌಲರ್‌ಗಳಿಗೆ ಅಷ್ಟೇನು ಸಹಕಾರಿಯಾಗಲ್ಲ
  • ಬಹುತೇಕ ತಂಡಗಳು 200ಕ್ಕೂ ಅಧಿಕ ರನ್‌ಗಳಿಸಿದ್ದಾರೆ
  • ಚೇಸಿಂಗ್‌ ಮಾಡಿರೋ ತಂಡ ಹೆಚ್ಚು ಬಾರಿ ಗೆದ್ದಿದೆ

ಪಂಜಾಬ್‌ ಕಿಂಗ್ಸ್‌

ಜಾನಿ ಬೈರ್‌ಸ್ಟೋವ್ (ವಿ.ಕೀ.), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಸ್ಯಾಮ್ ಕುರಾನ್ (ನಾಯಕ), ಅಶುತೋಷ್ ಶರ್ಮಾ, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ವಿಧ್ವತ್ ಕಾವೇರಪ್ಪ

ರಾಜಸ್ಥಾನ್‌ ರಾಯಲ್ಸ್‌

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ.), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

RELATED ARTICLES

Related Articles

TRENDING ARTICLES