Sunday, October 6, 2024

ಲಕ್ನೋ​ಗೆ ಡೆಲ್ಲಿ ಸವಾಲ್ : ಎರಡೂ ತಂಡಗಳಿಗೂ ‘ಗೆಲುವು’ ಅನಿವಾರ್ಯ, ಡೆಲ್ಲಿ ಗೆದ್ರೆ RCBಗೆ ವರ

ಬೆಂಗಳೂರು : ಐಪಿಎಲ್​ನ 64ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್​ಗೆ ಇದು ಈ ಆವೃತ್ತಿಯ ಕೊನೆಯ ಪಂದ್ಯವಾಗಿದೆ. ಪ್ಲೇಆಫ್ ಪ್ರವೇಶಕ್ಕಾಗಿ ಎರಡು ತಂಡಗಳಿಗೂ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಡೆಲ್ಲಿ ಗೆದ್ದರೆ ಆರ್​ಸಿಬಿಗೆ ವರವಾಗಲಿದೆ. ಲಕ್ನೋ ಗೆದ್ದರೆ ಆರ್​ಸಿಬಿಗೆ ಸಂಕಷ್ಟ ಎದುರಾಗಲಿದೆ.

ಡೆಲ್ಲಿ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು ಹಾಗೂ 7 ಪಂದ್ಯಗಳನ್ನು ಸೋತಿದೆ. ಲಕ್ನೋ ಆಡಿರುವ 12 ಪಂದ್ಯಗಳಲ್ಲಿ 6 ಗೆಲುವು ಹಾಗೂ 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಡೆಲ್ಲಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಲಕ್ನೋ 7ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯ ಹೊರತುಪಡಿಸಿದರೆ ಲಕ್ನೋಗೆ ಮುಂಬೈ ವಿರುದ್ಧ ಇನ್ನೂ ಒಂದು ಪಂದ್ಯ ಇರಲಿದೆ. ಆದರೂ, ಹೈದರಾಬಾದ್​ ವಿರುದ್ಧದ ಸೋಲಿನ ನಂತರ ಲಕ್ನೋದ ರನ್​ ರೇಟ್​ ಬಹಳ ಕುಸಿದಿದೆ. ಇಂದು ಗೆದ್ದು, ಮುಂಬೈ ವಿರುದ್ಧ ಗೆದ್ದರೆ ಲಕ್ನೋ ಸುಲಭವಾಗಿ ಪ್ಲೇಆಫ್​ ಪ್ರವೇಶಿಸಲಿದೆ. ಇಂದು ಡೆಲ್ಲಿ ಗೆದ್ದರೆ ಪ್ಲೇಆಫ್​ ಪ್ರವೇಶಿಸುವ ಅವಕಾಶವಿದೆ. ಸೋತರೆ ಡೆಲ್ಲಿ ಕ್ಯಾಪಿಟಲ್ಸ್​ ಸಹ ಮನೆ ಸೇರಲಿದೆ.

ಡೆಲ್ಲಿ vs ಲಕ್ನೋ ಬಲಾಬಲ

  • ಒಟ್ಟು ಪಂದ್ಯ : 4
  • ಡೆಲ್ಲಿ ಕ್ಯಾಪಿಟಲ್ಸ್‌ 1 ಗೆಲುವು
  • ಲಕ್ನೋ ಸೂಪರ್‌ ಜೈಂಟ್ಸ್‌ 3 ಗೆಲುವು

ಏಕನಾ ಸ್ಟೇಡಿಯಂ (ಲಕ್ನೋ)

  • ಒಟ್ಟು ಪಂದ್ಯ : 2
  • ಡೆಲ್ಲಿ ಕ್ಯಾಪಿಟಲ್ಸ್‌ 1 ಗೆಲುವು
  • ಲಕ್ನೋ ಸೂಪರ್‌ ಜೈಂಟ್ಸ್‌ : 1 ಗೆಲುವು

ಅರುಣ್‌ ಜೇಟ್ಲಿ ಸ್ಟೇಡಿಯಂ (ದೆಹಲಿ)

  • ಒಟ್ಟು ಪಂದ್ಯ : 2
  • ಡೆಲ್ಲಿ ಕ್ಯಾಪಿಟಲ್ಸ್‌ : 0
  • ಲಕ್ನೋ ಸೂಪರ್‌ ಜೈಂಟ್ಸ್‌ : 2 ಗೆಲುವು

ಡೆಲ್ಲಿ ಪಿಚ್‌ ಯಾರಿಗೆ ವರ?

  • ಬ್ಯಾಟಿಂಗ್‌, ಬೌಲಿಂಗ್‌ಗೂ ಪಿಚ್‌ ಸಹಕಾರಿ
  • ಹೆಚ್ಚು ಬ್ಯಾಟರ್‌ಗಳಿಗೆ ಅನುಕೂಲವಾಗಲಿದೆ
  • 200ಕ್ಕೂ ಹೆಚ್ಚು ರನ್‌ಗಳಿಸುವ ತಂಡಕ್ಕೆ ಜಯ
  • ಮೊದಲು ಬ್ಯಾಟ್‌ ಮಾಡಿದ ತಂಡಕ್ಕೆ ಹೆಚ್ಚು ಗೆಲುವು

ಲಕ್ನೋ ಸೂಪರ್‌ ಜೈಂಟ್ಸ್‌

ಕ್ವಿಂಟನ್ ಡಿ ಕಾಕ್, ಕೆ.ಎಲ್. ರಾಹುಲ್ (ನಾಯಕ/ವಿ.ಕೀ.), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್/ಅರ್ಶಿನ್ ಕುಲಕರ್ಣಿ, ಯಶ್ ಠಾಕೂರ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್

ಡೆಲ್ಲಿ ಕ್ಯಾಪಿಟಲ್ಸ್‌

ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ/ವಿ.ಕೀ.), ಶಾಯ್ ಹೋಪ್, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್

RELATED ARTICLES

Related Articles

TRENDING ARTICLES