Monday, May 20, 2024

SRH ಆರ್ಭಟಕ್ಕೆ ಲಕ್ನೋ ಬರ್ನ್ : 9.4 ಓವರ್ಗಳಲ್ಲೇ 167 ರನ್ ಚಚ್ಚಿ, ಗೆದ್ದು ಬೀಗಿದ ರೈಸರ್ಸ್

ಬೆಂಗಳೂರು : ಸನ್​ ರೈಸರ್ಸ್‌ ಹೈದರಾಬಾದ್ ಬ್ಯಾಟರ್​ಗಳ ಆರ್ಭಟಕ್ಕೆ ಲಕ್ನೋ ಸೂಪರ್​ ಜೈಂಟ್ಸ್‌ ಬರ್ನ್ ಆಗಿದೆ.

ಕೇವಲ 9.4 ಓವರ್‌ಗಳಲ್ಲೇ ಲಕ್ನೋ ನೀಡಿದ್ದ 166 ರನ್‌ಗಳ ಟಾರ್ಗೆಟ್​ ಅನ್ನು ವಿಕೆಟ್ ನಷ್ಟವಿಲ್ಲದೆ ಯಶಸ್ವಿಯಾಗಿ ಚೇಸ್​ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಅಲ್ಲದೆ, ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರು ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಸನ್​ ರೈಸರ್ಸ್ ಹೈದರಾಬಾದ್​ ತಂಡ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಲಕ್ನೋ ನೀಡಿದ್ದ 166 ಬೃಹತ್ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 9.4 ಓವರ್​ನಲ್ಲಿ ತಲುಪಿತು. ಈ ಮೂಲಕ ವಿಕೆಟ್ ಕಳೆದುಕೊಳ್ಳದೆ ಗೆದ್ದು ಇತಿಹಾಸ ನಿರ್ಮಿಸಿದೆ.

ಸನ್​ ರೈಸರ್ಸ್‌ ಹೈದರಾಬಾದ್ ಪರ ಟ್ರಾವಿಸ್ ಹೆಡ್​ 30 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 8 ಬೌಂಡರಿ ನೆರವಿನೊಂದಿಗೆ ಅಜೇಯ 89 ರನ್​ ಚಚ್ಚಿದರು. ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 75 ರನ್​ ಸಿಡಿಸಿದರು.

ಇತ್ತ ಲಕ್ನೋ ಬೌಲರ್​ಗಳು ಇವರಿಬ್ಬರ ಆರ್ಭಟಕ್ಕೆ ನಲುಗಿದರು. ಎಲ್ಲಾ ಬೌಲರ್​ಗಳು ಬಹಳಷ್ಟು ರನ್​ ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಯಶ್ ಠಾಕೂರ್ 47, ನವೀನ್ 37, ರವಿ ಬಿಷ್ಣೋಯಿ 34, ಕೃಷ್ಣಪ್ಪ ಗೌತಮ್ 29 ರನ್​ ಬಿಟ್ಟುಕೊಟ್ಟರು.

RELATED ARTICLES

Related Articles

TRENDING ARTICLES