Monday, July 1, 2024

‘ತಲೈವಾ’ಗೆ ಸಂಕಷ್ಟ : ರಜನಿಕಾಂತ್ ‘ಕೂಲಿ’ ಚಿತ್ರಕ್ಕೆ ಇಳಯರಾಜ ಲೀಗಲ್ ನೋಟಿಸ್

ಬೆಂಗಳೂರು : ನಟ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಹೌದು, ಅನುಮತಿ ಇಲ್ಲದೆ ರಜನಿಕಾಂತ್​ ನಟನೆಯ ಕೂಲಿ ಚಿತ್ರದಲ್ಲಿ ಇಳಯರಾಜ ಅವರ ಸಂಗೀತವನ್ನು ಬಳಸಿಕೊಂಡಿದ್ದಕ್ಕಾಗಿ ಸಂಸ್ಥೆ ಸನ್ ಪಿಕ್ಚರ್ಸ್ ಗೆ ನೋಟಿಸ್ ಕಳುಹಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ರಜನಿಕಾಂತ್ ನಟನೆಯ ಕೂಲಿ ಚಿತ್ರದ ಟೀಸರ್​ನಲ್ಲಿ ‘ತಂಗ ಮಗನ್’ ಚಿತ್ರದ ಹಾಡಿನ ತುಣುಕು ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್​ಗೆ ನೋಟಿಸ್ ನೀಡಿಲಾಗಿದೆ.

ತಂಗ ಮಗನ್(1983) ಸಿನಿಮಾದಲ್ಲಿ ನಟ ರಜನಿಕಾಂತ್ ನಟಿಸಿದ್ದರು. ಈ ಚಿತ್ರಕ್ಕೆ ಇಳಯರಾಜ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇಳಯರಾಜ ಟ್ಯೂನ್ ಕದ್ದ ಸಂಗೀತ ಸಂಯೋಜಕ ಅನಿರುದ್ದ್ ರವಿಚಂದರ್​ಗೂ ಇಳಯರಾಜ ಪರ ವಕೀಲರು ನೋಟಿಸ್ ಕಳುಹಿಸಿದ್ದಾರೆ.

ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಕೂಲಿ’ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ‘ಕೂಲಿ’ ಚಿತ್ರದ ಟೈಟಲ್ ಟೀಸರ್ ಅನ್ನು ರಿಲೀಸ್​ ಮಾಡಲಾಗಿದೆ. ಇದು ರಜನಿ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದೆ.

ಅನಿರುದ್ಧ್ ಸಂಗೀತ ಸಂಯೋಜನೆಯ ‘ಕೂಲಿ’ ಟೈಟಲ್ ಟೀಸರ್‌ನಲ್ಲಿ ಇಳಯರಾಜ ಅವರ ‘ತಂಗಮಗನ್’ ಚಿತ್ರದ ಹಾಡನ್ನು ಮರುಸೃಷ್ಟಿಸಲಾಗಿದೆ. ಹಾಗಾಗಿ, ಸಂಯೋಜಕರ ಅನುಮತಿಯಿಲ್ಲದೆ ತಮ್ಮ ಹಾಡಿನ ತುಣುಕನ್ನು ಚಿತ್ರದಲ್ಲಿ ಬಳಸಿದ್ದಕ್ಕಾಗಿ ಇಳಯರಾಜ ‘ಕೂಲಿ’ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದ್ದಾರೆ.

RELATED ARTICLES

Related Articles

TRENDING ARTICLES