Saturday, May 18, 2024

ಪ್ರಜ್ವಲ್ ರಾಸಲೀಲೆ : ರಾಜ್ಯದ ಸಹೋದರಿಯರ ಪರವಾಗಿ ನಾನೇ ಧ್ವನಿ ಎತ್ತುತ್ತೇನೆ: ಕುಮಾರಸ್ವಾಮಿ

ಬೆಂಗಳೂರು : ಹಾಸನ ಸಂಸದ ಹಾಗೂ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಸಹೋದರಿಯರ ಪರವಾಗಿ ನಾನೇ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಸಮಸ್ತ ಜನತೆ ಹಾಗೂ ಎಲ್ಲಾ ತಂದೆ ತಾಯಂದಿರು, ಸಹೋದರ ಸಹೋದರಿಯರಿಗೆ ನಾನು ವಿನಮ್ರತೆಯಿಂದ ಹೇಳ ಬಯಸುವುದು ಇಷ್ಟೇ. ಯಾರು ಕೂಡ ನನ್ನ ಬಗ್ಗೆಯಾಗಲಿ, ನನ್ನ ತಂದೆಯವರ ಬಗ್ಗೆಯಾಗಲಿ ಸಂಶಯಪಡುವುದು ಬೇಡ. ಈ ಪ್ರಕರಣದಲ್ಲಿ ಏನಾದರೂ ಸತ್ಯಾಸತ್ಯತೆ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಬಗ್ಗೆ ರಾಜ್ಯದ ಸಹೋದರಿಯರ ಪರವಾಗಿ ನಾನೇ ದನಿ ಎತ್ತುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ನನ್ನ ಹಾಗೂ ದೇವೇಗೌಡ್ರು ಹೆಸರು ತರಬೇಡಿ

ಈ​ ಪ್ರಕರಣದಲ್ಲಿ ತಪ್ಪು ಮಾಡಿದವರು ಯಾರೇ ಆಗಿದ್ದರು ಕಾನೂನಿಗೆ ತಲೆಬಾಗಲೇಬೇಕು. ಈ ವಿಚಾರದಲ್ಲಿ ನನ್ನ ಹೆಸರು ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ಹೆಸರು ತರಬೇಡಿ. ಪೆನ್ ಡ್ರೈವ್​ ಪ್ರಕರಣ ಮೂರು ದಿನಗಳಿಂದ ಚರ್ಚೆಯಾಗುತ್ತಿದೆ. ಪೆನ್​ ಡ್ರೈವ್​ ಪ್ರಕರಣದಲ್ಲಿ ಪ್ರಜ್ವಲ್ ತಪ್ಪು ಮಾಡಿದ್ರೆ ಶಿಕ್ಷೆ ಅನಿಭವಿಸಬೇಕು. ಇದರ ಮಧ್ಯೆ ಕುಟುಂಬವನ್ನು ತರೋದು ಬೇಡ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸುತ್ತಾನೆ, ಇದನ್ನು ವಹಿಸಿಕೊಂಡು ಬರುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES