Monday, May 6, 2024

ಪಂತ್ ಸ್ಫೋಟಕ ಬ್ಯಾಟಿಂಗ್ : ಗುಜರಾತ್​ಗೆ 225 ರನ್ ಬೃಹತ್ ಟಾರ್ಗೆಟ್

ಬೆಂಗಳೂರು : ರಿಷಭ್​ ಪಂತ್​ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತ ಕಲೆಹಾಕಿತು.

​ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್​ ಗಳಿಸಿತು.

ಇನ್ನಿಂಗ್ಸ್​ ಆರಂಭಿಸಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಹಾಗೂ ಶಾಯ್ ಹೋಪ್ ಬೇಗ ಔಟಾದರು. ಬಳಿಕ ಜೊತೆಯಾದ ನಾಯಕ ರಿಷಭ್ ಪಂತ್ ಹಾಗೂ ಆಲ್​ರೌಂಡರ್ ಅಕ್ಸರ್ ಪಟೇಲ್ ಗುಜರಾತ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು.

ರಿಷಭ್ ಪಂತ್ 43 ಎಸೆತಗಳಲ್ಲಿ 8 ಸಿಕ್ಸ್​ ಹಾಗೂ 5 ಬೌಂಡರಿಗಳ ನೆರವಿನೊಂದಿಗೆ ಅಜೇಯ 88 ರನ್​ ಸಿಡಿಸಿದರು. ಅಕ್ಸರ್ ಪಟೇಲ್ 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ 66 ರನ್​ ಗಳಿಸಿದರು. ಕೊನೆಯಲ್ಲಿ ಬಂದ ಸ್ಟಬ್ಸ್​ ಅಜೇಯ 26 ರನ್​ ಗಳಿಸಿದರು.

ಉಳಿದಂತೆ ಪೃಥ್ವಿ ಶಾ 11, ಜೇಕ್ ಫ್ರೇಸರ್-ಮೆಕ್‌ಗುರ್ಕ್ 23 ಹಾಗೂ ಶಾಯ್ ಹೋಪ್ 5 ರನ್​ ಗಳಿಸಿದರು. ಗುಜರಾತ್ ಟೈಟಾನ್ಸ್​ ಪರ ಸಂದೀಪ್ ವಾರಿಯರ್ 3 ಹಾಗೂ ನೂರ್​ ಅಹ್ಮದ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES