Friday, May 3, 2024

ನೇಹಾ ಕೊಲೆ ಬಳಿಕ ಮತ್ತೋರ್ವ ಹಿಂದೂ ಯುವಕನ ಬರ್ಬರ ಹತ್ಯೆ

ಯಾದಗಿರಿ : ಆತ ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದ ಹಿಂದೂ ಯುವಕ. ದಲಿತ ಬಡ ಕುಟುಂಬದ ಯುವಕ. ನಿತ್ಯ ಹಮಾಲಿ ಕೂಲಿ ಮಾಡಿ ಬದುಕು ಸಾಗಿಸ್ತಿದ್ದಾತ. ನಿನ್ನೆ ರಾತ್ರಿ ಮನೆಯಲ್ಲಿ ರೊಟ್ಟಿ ಇಲ್ಲ ಅಂತ ರೊಟ್ಟಿ ಕೇಂದ್ರಕ್ಕೆ ಖರೀದಿಗೆ ಹೋಗಿದ್ದ. ಅಂಗಡಿ ಬಂದ್ ಮಾಡಿದ್ರಿಂದ ಬಾಗಿಲು ಬಾರಿಸಿದ್ನಂತೆ. ಇಷ್ಟೇ ವಿಚಾರಕ್ಕೆ ಅನ್ಯಕೋಮಿನ ಯುವಕರು ಆತನನ್ನ ಮನ ಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆ.

ರೊಟ್ಟಿ ಕೇಳಲು ಹೋದ ಯುವಕನ ಕೊಲೆ. ಮನೆ ಎದುರು ಜಮಾಯಿಸಿರೋ ಸಂಬಂಧಿಕರು. ಬಹಿರಂಗವಾಗಿಯೇ ಪೊಲೀಸರ ವಿರುದ್ಧ ಮಾಜಿ ಶಾಸಕನ ಅಸಮಾಧಾನ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿಯಲ್ಲಿ.

ಹೌದು, ಯಾದಗಿರಿ ನಗರದ ಶಹಾಪೂರ ಪೇಟ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರಕ್ಕಾಗಿ ಹಿಂದೂ ಯುವಕನ ಕೊಲೆಯಾಗಿದೆ. ಶಹಾಪೂರ ಪೇಟ್ ಬಡಾವಣೆ ನಿವಾಸಿ (22) ರಾಕೇಶ್ ಎಂಬ ಹಿಂದೂ ಯುವಕ ವೃತ್ತಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದ. ಎಂದಿನಂತೆ ಕೆಲಸ ‌ಮುಗಿಸಿಕೊಂಡು ಬಂದಿದ್ದ, ಆತ ಬರುವಷ್ಟರಲ್ಲಿ ಮನೆಯಲ್ಲಿ ರೊಟ್ಟಿ ಇರಲಿಲ್ಲ. ಹೀಗಾಗಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ಹೋಗಿದ್ದ, ಅಂಗಡಿ ಬಂದ್ ಮಾಡಿದಕ್ಕಾಗಿ‌ ಬಾಗಿಲು ಬಾರಿಸಿದ್ನಂತೆ. ಈ ವೇಳೆ ಹೊರಗೆ ಬಂದು ರೊಟ್ಟಿ ಇಲ್ಲ ಅಂದಿದ್ಕೆ ಮನೆಯಲಿರೋದನ್ನೆ ತಿಂದು ಯುವಕ ರಾಕೇಶ್ ಮಲಗಿದ್ದ.

ತಡರಾತ್ರಿ ಮುಸ್ಲಿಂ ಯುವಕ ಫಯಾಜ್ ಸೇರಿ ನಾಲ್ವರು ಯುವಕರು ಮನೆಗೆ ನುಗ್ಗಿ ಹಿಂದೂ ಯುವಕನನ್ನ ಹೊರಗೆ ಎಳೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ, ಆತನ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾರೆ. ಇನ್ನೂ ಈ ಕೊಲೆ ನಿನ್ನೆ ತಡರಾತ್ರಿ ನಡೆದ್ರೂ ಸಹ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರು. ಕೂಡಲೇ ಬಿಜೆಪಿ ಕಾರ್ಯಕರ್ತರಿಗೆ‌ ಮಾಹಿತಿ ಬರುತ್ಯಿದ್ದಂತೆ ಪೊಲೀಸರು ಅಲರ್ಟ್ ಆದ್ರು. ಅಲ್ಲದೇ ಬಹಿರಂಗವಾಗಿಯೇ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಕೊಲೆ ಪ್ರಕರಣದ ತನಿಖೆ ನಡೆಸದಿದ್ರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ರು. ಈ ಬೆನ್ನಲೇ ಪೊಲೀಸರು ಕೊಲೆಯಾದ ಯುವಕನ ಮನೆಗೆ ದೌಡಾಯಿಸಿ ಶವ ಮರಣ್ಣೋತ್ತರ ಪರೀಕ್ಷೆಗೆ ಕಳಿಸಿದ್ರು.

ಇನ್ನೂ, ಬಿಜೆಪಿ ಕಾರ್ಯಕರ್ತರು ಎಚ್ಚೇತ್ತುಕೊಂಡು ಪ್ರತಿಭಟನೆಗೆ ಮುಂದಾಗ್ತಿದ್ದಂತೆ ಪೊಲೀಸರು ಪುಲ್ ಅಲರ್ಟ್ ಆಗಿದ್ರು. ಕೂಡಲೇ ಕೊಲೆಯಾದ ಹಿಂದೂ ಯುವಕ ರಾಕೇಶ್ ಮನೆಗೆ ದಾವಿಸಿದ್ರು. ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಸ್ಥಳದಲ್ಲಿ ನಿಂತು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ರು. ಇದೇ ವೇಳೆ ಮಾದ್ಯಮಕ್ಕೆ ಎಸ್ಪಿ ಸಂಗೀತಾ ಹೇಳಿಕೆ ನೀಡಿದ್ದು, ಬಿಜೆಪಿಯವರಿಗೆ ಮಾಹಿತಿ ಬರೋಕ್ಕಿಂತ ಮೊದಲೇ ನಮಗೆ ಮಾಹಿತಿ ಬಂದಿತ್ತು. ಆದರೆ, ಕುಟುಂಬದವ್ರು ಕಂಪ್ಲಿಟ್ ಕೊಟ್ಟಿರಲಿಲ್ಲ. ಹೀಗಾಗಿ ತಡವಾಯಿತು. ಇದ್ರಲ್ಲಿ ಕಾಂಪ್ರಮೈಸ್ ಆಗೋದ್ರಲ್ಲಿ ಪೊಲೀಸರ ಯಾವುದೇ ಪಾತ್ರ ಇಲ್ಲ ಎಂದರು. ಬಳಿಕ ಕುಟುಂಬದ ಅವರ ಹೇಳಿಕೆ ಪಡೆದು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಕೊಲೆ ಆರೋಪಿ ಫಯಾಜ್​ಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.

ಒಟ್ಟಾರೆ, ಹುಬ್ಬಳ್ಳಿಯಲ್ಲಿ ನಡೆದ ಹಿಂದು ಯುವತಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗುರಿಯಲ್ಲಿ‌ ಮತ್ತೋರ್ವ ಹಿಂದೂ ಯುವಕನ ಕೊಲೆಯಾಗಿದ್ದು ವಿಪರ್ಯಾಸವೇ ಸರಿ. ಕೂಡಲೇ ಅಧಿಕಾರಿಗಳು ಆರೋಪಿ ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕಿದೆ.

RELATED ARTICLES

Related Articles

TRENDING ARTICLES