Saturday, May 4, 2024

66,000 ಭಾರತೀಯರಿಗೆ ಅಮೆರಿಕ ಪೌರತ್ವ : ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ

ಬೆಂಗಳೂರು : 2022ರಲ್ಲಿ ಸುಮಾರು 65,960 ಭಾರತೀಯರು ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಅಮೆರಿಕದ ಕಾಂಗ್ರೆಷನಲ್ ರಿಸರ್ಚ್ ತಿಳಿಸಿದೆ.

ಈ ಮೂಲಕ ಅಮೆರಿಕದಲ್ಲಿ ಹೊಸದಾಗಿ ನಾಗರಿಕತ್ವ ಪಡೆಯುವ ನಾಗರಿಕರ ದೇಶಗಳ ಪೈಕಿ 2ನೇ ಸ್ಥಾನದಲ್ಲಿದೆ. ಅಮೆರಿಕದ ಜನಗಣತಿ ಬ್ಯೂರೊ ಅಮೆರಿಕನ್ ಕಮ್ಯುನಿಟಿ ಸಮೀಕ್ಷೆಯ ಮಾಹಿತಿಯ ಪ್ರಕಾರ, 2022ರಲ್ಲಿ ಅಂದಾಜು 46 ಮಿಲಿಯನ್ ವಿದೇಶಿ ಸಂಜಾತ ವ್ಯಕ್ತಿಗಳು ಅಮೆರಿಕದಲ್ಲಿ ನೆಲೆಸಿದ್ದಾರೆ.

ಅಮೆರಿಕದ ಒಟ್ಟು ಜನಸಂಖ್ಯೆಯ 333 ಮಿಲಿಯನ್‌ನ ಸರಿಸುಮಾರು ಶೇ.14ರಷ್ಟು ವಿದೇಶಿಗರು. ಇದರಲ್ಲಿ 24.5 ಮಿಲಿಯನ್ ಜನರು. ಅಂದರೆ, ಶೇ.53ರಷ್ಟು ಜನರು ಸ್ವಾಭಾವಿಕ ನಾಗರಿಕತ್ವ ಪಡೆದಿದ್ದಾರೆ. ಏಪ್ರಿಲ್ 15ರ ಅಮೆರಿಕದ ನ್ಯಾಚುರಲೈಸೇಶನ್ ಪಾಲಿಸಿ ವರದಿಯಲ್ಲಿ 2022ರ ಆರ್ಥಿಕ ವರ್ಷದಲ್ಲಿ ಸ್ವತಂತ್ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ಪ್ರಕಾರ, 9,69,380 ವ್ಯಕ್ತಿಗಳು ನೈಸರ್ಗಿಕ ನಾಗರಿಕತ್ವ ಪಡೆದಿದ್ದಾರೆ.

ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ

ಇರಾಕ್‌ನ ಜುಮ್ಮರ್ ನಗರದಿಂದ ಈಶಾನ್ಯ ಸಿರಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕನಿಷ್ಠ ಐದು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಇರಾಕ್ ಭದ್ರತಾ ಪಡೆಯ ಮೂಲಗಳು ತಿಳಿಸಿವೆ. ಫೆಬ್ರವರಿಯಲ್ಲಿ ಇರಾಕ್‌ನಲ್ಲಿ ಇರಾನ್ ಬೆಂಬಲಿತ ಗುಂಪುಗಳು ಅಮೆರಿಕ ಸೇನಾ ಪಡೆಗಳ ಮೇಲಿನ ದಾಳಿಯನ್ನು ನಿಲ್ಲಿಸಿದ್ದವು. ಆದಾದ ಬಳಿಕ ಅಮೆರಿಕದ ಸೇನಾ ಪಡೆಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದೆ.

ಇರಾಕ್ ಪ್ರಧಾನಿ ಸುಡಾನಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತುಕತೆ ನಡೆಸಿ ಹಿಂದಿರುಗಿದ ಒಂದು ದಿನದ ಬಳಿಕ ಈ ದಾಳಿ ನಡೆದಿದೆ. ಇರಾಕ್‌ನ ಜುಮ್ಮರ್ ಗಡಿ ಪ್ರದೇಶದಲ್ಲಿ ಟ್ರಕ್‌ಗಳು ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES