Saturday, May 4, 2024

ಕಟೀಲು ಜಾತ್ರೋತ್ಸವದಲ್ಲಿ ‘ತೂಟೆದಾರ’ : ಇದೇ ನೋಡಿ ‘ಬೆಂಕಿಯಾಟ’

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜಾತ್ರೋತ್ಸವ ಜರುಗಿದೆ.

ಕಟೀಲು ದೇವಸ್ಥಾನ ಮುಂಭಾಗದಲ್ಲಿ ಈ ವಿಭಿನ್ನ ಆಚರಣೆ ನಡೆದಿದೆ. ತೂಟೆದಾರ ಬಹಳ ವೈಭವದಿಂದ ನಡೆದಿದೆ. ಅತ್ತೂರು ಹಾಗೂ ಕೊಡೆತ್ತೂರು ಗ್ರಾಮಗಳ ನಡುವೆ ಅಗ್ನಿ ಆಟ ನಡೆದಿದೆ.

ವೃತನಿಷ್ಠೆಯಿಂದ ಅಗ್ನಿಕೇಳಿಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಪರಸ್ಪರ ಬೆಂಕಿಯ ದೀವಟಿಕೆ ಎರಚಾಡುವ ಮೂಲಕ ಭಕ್ತರು ಹರಕೆ ಸಲ್ಲಿಸಿದರು. ಕಟೀಲು ದೇವಿಗೆ ಈ ಆಚರಣೆ ಇಷ್ಟವಾದ ಕಾರಣ ಅನಾದಿ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಜಾತ್ರೆಯ ಸಂದರ್ಭದಲ್ಲಿ ಮಾತ್ರ ಈ ಅಗ್ನಿಕೇಳಿ ಆಚರಣೆ ನಡೆಯುತ್ತದೆ.

ಭಕ್ತರು ಪರಸ್ಪರ ಬೆಂಕಿಯ ದೀವಟಿಕೆ ಎರಚಾಡುವ ಮೂಲಕ ಹರಕೆ ಸಲ್ಲಿಸಿದರು.

ಅತ್ತೂರು ಹಾಗೂ ಕೊಡೆತ್ತೂರು ಗ್ರಾಮಗಳ ನಡುವೆ ಅಗ್ನಿ ಆಟ ನಡೆಯಿತು.

ಜಾತ್ರೆ ಹಿನ್ನಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.

ಕಟೀಲು ದೇವಸ್ಥಾನ ಮುಂಭಾಗದಲ್ಲಿ ಈ ವಿಭಿನ್ನ ಅಗ್ನಿ ಆಟ ಆಚರಣೆ ನಡೆದಿದೆ. 

RELATED ARTICLES

Related Articles

TRENDING ARTICLES