Saturday, May 4, 2024

ಇಲ್ಲಿ ಲವ್ ಜಿಹಾದ್, ಮತಾಂತರದ ಟ್ರೈನಿಂಗ್ ಸೆಂಟರ್‌ ಇದೆ : ಜಗದೀಶ್ ಶೆಟ್ಟರ್ ಆರೋಪ

ಹುಬ್ಬಳ್ಳಿ : ಇದೊಂದು ರಾಕ್ಷಸಿ ಕೃತ್ಯ. ಇಲ್ಲಿ ಲವ್ ಜಿಹಾದ್, ಮತಾಂತರದ ಟ್ರೈನಿಂಗ್ ಸೆಂಟರ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಮೃತ ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾತನಾಡಿ, ಸರ್ಕಾರದ ವ್ಯವಸ್ಥೆ ಸರಿ ಇಲ್ಲದಿದ್ದಾಗ ಈ ರೀತಿಯ ಮನಸ್ಥಿತಿ ಬರಲು ಸಾಧ್ಯ ಹೇಳಿದ್ದಾರೆ.

ಉತ್ತರ ಪ್ರದೇಶ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದೇ ಉತ್ತರ ಪ್ರದೇಶದಲ್ಲಿ ಶಾಂತಿ ವಾತಾವರಣ ಇದೆ. ಇದಕ್ಕೆ ಯೋಗಿ ಆಡಳಿತ ಕಾರಣ. ಅಲ್ಪಸಂಖ್ಯಾತರ ತುಷ್ಟೀಕರಣ ಇದಕ್ಕೆ ಕಾರಣ. ಲವ್ ಜಿಹಾದ್ ಟ್ರೈನಿಂಗ್ ಸೆಂಟರ್ ಇಲ್ಲಿರಬೇಕು ಎಂದು ದೂರಿದ್ದಾರೆ.

ಈ ಘಟನೆಯ ಹಿಂದಿರುವ ಎಲ್ಲರ ಬಂಧನವಾಗಬೇಕು. ಸಿಎಂ ಸಿದ್ದರಾಮಯ್ಯಗೆ ನೇಹಾ ಪೋಷಕರಿಗೆ ಸಾಂತ್ವನ ಹೇಳುವಷ್ಟು ಟೈಮ್ ಇಲ್ಲವೇ..? ಅವರಿಗೆ ವ್ಯವಧಾನವೇ ಇಲ್ಲ ಅಂದ್ರೆ ಹೆಗೆ..? ಇವ್ರು ತುಷ್ಟೀಕಾರಣ ರಾಜಕಾರಣಕ್ಕೆ ಜೋತುಬಿದ್ದಿದ್ದಾರೆ. ಇದರಲ್ಲಿ ರಾಜಕಾರಣ ಮಾಡೋ ಪ್ರಶ್ನೆಯೇ ಇಲ್ಲ. ನಿಸ್ಪಕ್ಷಪಾತ ತನಿಖೆ ಆಗಬೇಕು. ಎನ್​ಕೌಂಟರ್ ಕಾನೂನು ಜಾರಿಗೆ ತರಬೇಕು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಬೇಕು. ತಕ್ಷಣ ಏನಾದರೂ ಒಂದು ಶಿಕ್ಷೆ ಆಗಬೇಕು. ಎನ್​ಕೌಂಟರ್ ಮೂಲಕ ಎಚ್ಚರಿಕೆ ಗಂಟೆ ಬಾರಿಸಬೇಕು ಎಂದು ತಿಳಿಸಿದ್ದಾರೆ.

ಯಾರನ್ನೋ ಬಚಾವ್ ಮಾಡುವ ಹುನ್ನಾರ

ನೇಹಾ ಕೊಲೆ ಪ್ರಕರಣದಲ್ಲಿ ಸಿಒಡಿ ಇತ್ಯಾದಿ ತನಿಖೆ ಮಾಡಬೇಕು. ಯಾವ ರೀತಿ ತನಿಖೆ ಮಾಡಿದ್ದರೋ ಗೊತ್ತಾಗ್ತಿಲ್ಲ. ಇನ್ನೂ ಐದು ಜನ ಇದಾರೆ ಅಂತ ನೇಹಾ ತಂದೆ ಹೇಳ್ತಿದ್ದಾರೆ. ಅದರ ಬಗ್ಗೆ ಯಾವುದೇ ರೀತಿಯ ಕ್ರಮವಿಲ್ಲ. ನೇಹಾಳ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ತನಿಖೆ ನಡೆವಾಗಲೇ ಸಿಎಂ, ಗೃಹ ಸಚಿವರು ವೈಯಕ್ತಿಕ ಘಟನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಅದರ ದುಷ್ಪರಿಣಾಮ ನೋಡಿ ರಿಯಾಕ್ಟ್ ಮಾಡಬೇಕು. ಯಾರನ್ನೋ ಬಚಾವ್ ಮಾಡಲು ಈ ರೀತಿಯ ಹೇಳಿಕೆ ನೀಡಬಾರದು ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES