Saturday, May 4, 2024

ಮೊದಲು ಗೆಲ್ಲಿಸೋಣ, ಆಮೇಲೆ ನೀರು ಕೇಳೋಣ : ಹೆಚ್.ಡಿ. ದೇವೇಗೌಡ

ಚಿಕ್ಕಬಳ್ಳಾಪುರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರವೂ ಸೇರಿದಂತೆ 28 ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ, ದೆಹಲಿಗೆ ಕಳುಹಿಸೋಣ. ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿ ಅವರನ್ನ ಕೇಳೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕರೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಐ.ಎನ್.ಡಿ.ಐ.ಎ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿಂದು ಒಂದು ಟ್ಯಾಂಕರ್ ನೀರಿಗೆ 2,500 ರೂ. ತಗೋತಿದ್ದಾರೆ. ಈ ನಡುವೆ ರಾಜ್ಯದಲ್ಲಿ 5 ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್ ದೇಶವಾಸಿಗಳಿಗೆ 25 ಗ್ಯಾರಂಟಿ ಕೊಟ್ಟಿದೆ. 10 ವರ್ಷಗಳಿಂದ ಸರಿಯಾದ ವಿಪಕ್ಷ ನಾಯಕನನ್ನು ಪಡೆಯಲು ಯೋಗ್ಯತೆ ಇಲ್ಲದ ಕಾಂಗ್ರೆಸ್, 400 ಸ್ಥಾನ ಗೆಲ್ಲಲು ಮನಸ್ಸು ಮಾಡಿರುವ ಮೋದಿ ಅವರನ್ನ ಸೋಲಿಸಬೇಕು ಅಂದುಕೊಂಡಿದೆ. ಆದ್ದರಿಂದ ನಮ್ಮ ಕಾಣಿಕೆಯಾಗಿ ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸಿ ದೆಹಲಿಗೆ ಕಳುಹಿಸೋಣ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ

ಈ ರಾಜ್ಯಕ್ಕೆ ಚೊಂಬು ಕೊಟ್ಟಿದ್ದು ಯಾರು? ಸೋನಿಯಾಗಾಂಧಿ, ಯುಪಿಎ ಜನರಿಗೆ ಚೊಂಬು ಕೊಟ್ಟಿದ್ದು. ಕಾಂಗ್ರೆಸ್‌ನವರು ಜನರಿಗೆ ಚೊಂಬು ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​​​ ರಾಜ್ಯವನ್ನ ಲೂಟಿ ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ. ರಾಜ್ಯದಲ್ಲಿ ನಾವು 28 ಕ್ಷೇತ್ರಗಳನ್ನ ಗೆದ್ದೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES