Friday, May 3, 2024

ನೇಹಾ ನನಗೆ ಮಗಳಿದ್ದಂತೆ, ನಾಳೆ ನನ್ನ ಮಗಳಿಗೂ ಈ ರೀತಿ ಆದ್ರೆ ಕಷ್ಟನೇ : ಫಯಾಜ್ ತಂದೆ

ಬೆಳಗಾವಿ : ಮೃತ ನೇಹಾ ನನಗೆ ಮಗಳಿದ್ದಂತೆ. ಇವತ್ತು ನೇಹಾಗೆ ಆದ ಕಷ್ಟನೇ ನಾಳೆ ನನ್ನ ಮಗಳಿಗೂ ಆದರೂ ಕಷ್ಟನೇ ಎಂದು ಆರೋಪಿ ಫಯಾಜ್​ ತಂದೆ‌ ಬಾಬಾ ಸಾಹೇಬ್‌ ಸುಬಾನಿ ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ನೇಹಾ ತಂದೆಯ ಬಳಿ ಕ್ಷಮೆಯಾಚಿಸುತ್ತೇನೆ. ಇನ್ನೊಂದು ಸಲ ಯಾವ ಹೆಣ್ಮಕ್ಕಳಿಗೂ ತೊಂದರೆ ಕೊಡಬಾರದು, ಅಂತಹ ಶಿಕ್ಷೆ ನನ್ನ ಮಗನಿಗೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ನೇಹಾ ಅವರ ತಂದೆ ನನಗೆ ಕರೆ ಮಾಡಿದ್ದರು. ನಿಮ್ಮ ಮಗನಿಂದ ನಮ್ಮ ಮಗಳಿಗೆ ತೊಂದರೆ ಇದೆ. ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಅಂತ ಹೇಳಿದ್ದರು. ಹೀಗಾಗಿ, ನಾನು ಫಯಾಜ್​ ನನ್ನು ಬೆಳಗಾವಿಗೆ ಕರೆದುಕೊಂಡು ಬಂದಿದ್ದೆ. ಕಳೆದ 2 ವರ್ಷದಿಂದ ನನ್ನ ಜೊತೆಗೆ ಇರಲಿಲ್ಲ. ನನ್ನ ಪತ್ನಿ ಜೊತೆ ಇದ್ದ ಎಂದು ಹೇಳಿದ್ದಾರೆ.

ದೇಶ ಸೈನಿಕನನ್ನಾಗಿ ಮಾಡುವ ಆಸೆ ಇತ್ತು

ನನ್ನ ಮಗನನ್ನು ದೇಶ ಸೈನಿಕನನ್ನಾಗಿ ಮಾಡಬೇಕು ಅಂತ ಬಹಳ ಆಸೆ ಇತ್ತು. ಇದಕ್ಕಾಗಿ ಬಾಡಿಬಿಲ್ಡರ್‌ ಅನ್ನಾಗಿ ಮಾಡುತ್ತಿದ್ದೆ. ವಿದ್ಯಾಭ್ಯಾಸಕ್ಕಾಗಿ ದುಡ್ಡು ಹಣ ಕೊಡುತ್ತಿದ್ದೆ. ಫಯಾಜ್ ಹಾಗೂ ಮಗಳು ನನ್ನ ಹೆಂಡತಿ ಜೊತೆ ಇದ್ದರು. ನಾನು ಒಬ್ಬನೇ ಬೇರೆ ಇದ್ದೆ. 6 ವರ್ಷದಿಂದ ನಾನು ಹಾಗೂ ನನ್ನ ಹೆಂಡತಿ ಬೇರೆ ಇದ್ದೇವೆ. ದುಡ್ಡು ಬೇಕಾದರೆ ಮಾತ್ರ ಆತ ಫಯಾಜ್​ ನನಗೆ ಕರೆ ಮಾಡುತ್ತಿದ್ದ. ಇಂದು ಆತ ಕ್ಷಮಿಸಲಾರದ ತಪ್ಪು ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES