Thursday, May 2, 2024

ನೇಹಾ ಕೊಲೆ : ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಅಡ್ಡ ಆಗಿದೆ : ಬೊಮ್ಮಾಯಿ ಆರೋಪ

ಹಾವೇರಿ : ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೂಂಡಾಗಳ ರಾಜ್ಯವಾಗಿದೆ. ಸಮಾಜಘಾತಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜಮರ್ಯಾದೆ ಸಿಕ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನ ರಾಜಕೀಯ ನೀತಿಯಿಂದ ಗೂಂಡಾಗಳು ರಾಜಾರೋಷವಾಗಿ ಓಡಾಡ್ತಿದಾರೆ. ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಅಡ್ಡ ಆಗಿದೆ. ಕಾಲೇಜು ಆವರಣದಲ್ಲಿ ಹಗಲು ಹೊತ್ತಿನಲ್ಲಿ ಆ ಹುಡುಗ 9 ಸಲ ಇರಿದು ಓಡಿ ಹೋಗಿದ್ದಾನೆ. ಅವನ ಹಿಂದೆ ಯಾವ ಶಕ್ತಿಯಿದೆ? ಗೃಹ ಸಚಿವರು ಹಗುರವಾಗಿ ಹೇಳಿಕೆ ಕೊಟ್ಟರೆ, ಕ್ರಿಮಿನಲ್​ಗಳಿಗೆ ಪುಷ್ಠಿ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.

ಸಿಎಂ ಟ್ವೀಟ್ ಮಾಡಿದ್ರೆ ಅವರ ಜವಾಬ್ದಾರಿ ಮುಗಿತು

ಸರ್ಕಾರ ರಾಜಕೀಯ ದೃಷ್ಟಿಯಿಂದ ಈ ಪ್ರಕರಣ ನೋಡುತ್ತಿದೆ. ಹಾವೇರಿಯ ಪ್ರಕರಣದಲ್ಲಿ ಆರಂಭದಲ್ಲಿ ಅತ್ಯಾಚಾರ ಅಲ್ಲ ಎಂದು ಹೇಳಿದ್ರು. ಅವತ್ತು ಸಹ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದ್ದರು. ಬೆಳಗಾವಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ ನಡೆದಿತ್ತು. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಸಿಎಂ ಟ್ವೀಟ್ ಮಾಡಿದ್ರೆ ಅವರ ಜವಾಬ್ದಾರಿ ಮುಗಿತು. ಉನ್ನತ ಮಟ್ಟದ ತನಿಕೆ ಮಾಡಬೇಕು, ಎಸ್​ಐಟಿ ತನಿಖೆ ಆಗಬೇಕು. ಕೇಲವರ ರಕ್ಚಣೆಗಾಗಿ ಪ್ರಕರಣಗಳನ್ನ ಎಸ್​ಐಟಿ ತನಿಖೆಗೆ ಸರ್ಕಾರ ಕೊಡುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES