Thursday, May 2, 2024

ರೋಹಿತ್ ಹೊಸ ದಾಖಲೆ : MS ಧೋನಿ ದಾಖಲೆ ಸರಿಗಟ್ಟಲಿದ್ದಾರೆ ಹಿಟ್ ಮ್ಯಾನ್

ಬೆಂಗಳೂರು : ಇಂದು ಮುಂಬೈ ಇಂಡಿಯನ್ಸ್ ಹಾಗೂ ಬ್ಯಾಟರ್ ರೋಹಿತ್ ಶರ್ಮಾ ಅವರು ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಐಪಿಎಲ್​ನಲ್ಲಿ 250ನೇ ಪಂದ್ಯ ಆಡಲಿದ್ದಾರೆ. ಈ ಮೂಲಕ ಧೋನಿ ಬಳಿಕ ಈ ದಾಖಲೆ ಬರೆದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ತಂಡಗಳ ಪರ ಒಟ್ಟು 256 ಪಂದ್ಯಗಳನ್ನಾಡುವ ಮೂಲಕ ಎಂ.ಎಸ್ ಧೋನಿ ಈ ವಿಶೇಷ ದಾಖಲೆ ಬರೆದಿದ್ದಾರೆ.

ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ಪರ ಒಟ್ಟು 249 ಪಂದ್ಯಗಳನ್ನಾಡಿದ್ದಾರೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರೆ 250 ಐಪಿಎಲ್ ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಲಿದ್ದಾರೆ.

4ನೇ ಸ್ಥಾನದಲ್ಲಿ ಕಿಂಗ್ ಕೊಹ್ಲಿ

ಆರ್​ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್​ಸಿಬಿ ತಂಡದಲ್ಲಿ ಆಡುತ್ತಿರುವ ಕೊಹ್ಲಿ ಒಟ್ಟು 244 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಕೊಹ್ಲಿ ಕೂಡ 250 ಪಂದ್ಯಗಳ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ಐಪಿಎಲ್​ನಲ್ಲಿ ಹೆಚ್ಚು ಪಂದ್ಯ ಆಡಿದವರು

  • ಮಹೇಂದ್ರ ಸಿಂಗ್​ ಧೋನಿ : 256
  • ರೋಹಿತ್ ಶರ್ಮಾ : 249
  • ದಿನೇಶ್ ಕಾರ್ತಿಕ್ : 249 (ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಲಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು)
  • ವಿರಾಟ್ ಕೊಹ್ಲಿ : 244 (ರಾಯಲ್ ಚಾಲೆಂಜರ್ಸ್ ಬೆಂಗಳೂರು)

RELATED ARTICLES

Related Articles

TRENDING ARTICLES