Thursday, May 2, 2024

ಬುಮ್ರಾ ಬೆಂಕಿ ಬೌಲಿಂಗ್ : ಪಂಜಾಬ್​ನ ನಾಲ್ಕನೇ ವಿಕೆಟ್ ಪತನ

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್​ ಬೃಹತ್ ಮೊತ್ತ ಕಲೆಹಾಕಿದೆ.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಿತು.

ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 192 ರನ್​ ಕಲೆಹಾಕಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ 78, ರೋಹಿತ್ ಶರ್ಮಾ 36, ತಿಲಕ್ ವರ್ಮಾ 34, ಹಾರ್ದಿಕ್ ಪಾಂಡ್ಯ 10 ಹಾಗೂ ಟೀಮ್ ಡೇ ವಿಡ್ 14 ರನ್​ ಗಳಿಸಿದರು.

ಪಂಜಾಬ್​ ಕಿಂಗ್ಸ್​ ಪರ ಹರ್ಷಲ್ ಪಟೇಲ್ 3, ನಾಯಕ ಸ್ಯಾಮನ್ ಕರ್ರನ್ 2 ಹಾಗೂ ರಬಾಡ ಒಂದು ವಿಕೆಟ್ ಪಡೆದರು. ಪಂಜಾಬ್​ ಗೆಲ್ಲಲು 193 ರನ್​ ಗಳಿಸಬೇಕಿದೆ.

ಪಂಜಾಬ್ 4ನೇ ವಿಕೆಟ್ ಪತನ

ಬೃಹತ್ ಟಾರ್ಗೆಟ್​ ಬೆನ್ನಟ್ಟಿರುವ ಪಂಜಾಬ್​ ಕಿಂಗ್ಸ್​ ಆರಂಭದಲ್ಲೇ ಮುಗ್ಗರಿಸಿದೆ. ಮುಂಬೈ ಬೌಲಿಂಗ್​ ದಾಳಿಗೆ ಪಂಜಾಬ್ ಬೌಲರ್​ಗಳು ಪೆವಿಲಿಯನ್ ಪೆರೇಡ್​ ನಡೆಸಿದರು. ಇನ್ನಿಂಗ್ಸ್​ ಆರಂಭಿಸಿದ ಫ್ರಭಾಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾದರು.

ರಿಲೀ ರೊಸೊವ್ 1 ರನ್​ ಗಳಿಸಿ ನಿರ್ಗಮಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಸಹ 1 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಸ್ಯಾಮ್ ಕರ್ರಾನ್ 6 ರನ್​ ಗಳಿಸಿ ಪೆವಿಲಿಯನ್​ ಕಡೆ ಮುಖ ಮಾಡಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್​ ಪಡೆದರು.

RELATED ARTICLES

Related Articles

TRENDING ARTICLES