Wednesday, May 1, 2024

ಮುಂಬೈಗೆ ಪಂಜಾಬ್ ಸವಾಲ್ : ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಡೆ ಗೆಲುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ಐಪಿಎಲ್​ನ 33ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್​ ಮುಖಾಮುಖಿಯಾಗಲಿವೆ.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ ಈ ರೋಚಕ ಕದನಕ್ಕೆ ಸಜ್ಜಾಗಿದೆ. ಐಪಿಎಲ್​ ಪ್ಲೇಆಫ್​ ಅವಕಾಶ ಅಂತಿಮಗೊಳಿಸುವ ನಿರ್ಣಾಯಕ ಹಂತ ತಲುಪಿದೆ. ಹೀಗಾಗಿ, ಇಂದಿನ ಪಂದ್ಯ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ.

ಪಾಯಿಂಟ್​​ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಹಾಗೂ ಪಂಜಾಬ್ ತಂಡಗಳು ಹೇಗಾದರೂ ಮಾಡಿ ಪಂದ್ಯ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿವೆ. ಮುಂಬೈ 6 ಪಂದ್ಯಗಳನ್ನು ಆಡಿದ್ದು 2 ಪಂದ್ಯ ಗೆದ್ದು, 4 ಪಂದ್ಯ ಸೋತಿದೆ. ಪಂಜಾಬ್​ ಸಹ 6 ಪಂದ್ಯ ಆಡಿದ್ದು 4 ಪಂದ್ಯ ಸೋತು, 2 ಪಂದ್ಯ ಗೆದ್ದಿದೆ. ಪಂಜಾಬ್ 8ನೇ ಸ್ಥಾನದಲ್ಲಿದ್ದರೆ, ಮುಂಬೈ 9ನೇ ಸ್ಥಾನದಲ್ಲಿದೆ.

ಐಪಿಎಲ್​ ಇತಿಹಾಸದಲ್ಲಿ ಈವರೆಗೆ ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೆ 16 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ 15 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಇಂದಿನ ಪಂದ್ಯ ಗೆದ್ದರೆ ಸಮಬಲ ಸಾಧಿಸಲಿದೆ.

ಮುಂಬೈ ಇಂಡಿಯನ್ಸ್

ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಲ್

ಪಂಜಾಬ್ ಕಿಂಗ್ಸ್​

ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್, ಕಗಿಸೊ ರಬಾಡ

RELATED ARTICLES

Related Articles

TRENDING ARTICLES