Thursday, May 2, 2024

5.7 ಕೋಟಿ ಚಿನ್ನ, ಲಂಡನ್​ನಲ್ಲಿ 10 ಕೋಟಿಯ ಬಂಗಲೆ : ಬಿಜೆಪಿ ಅಭ್ಯರ್ಥಿ ಪಲ್ಲವಿ 1,400 ಕೋಟಿ ಆಸ್ತಿಯ ಒಡತಿ

ಬೆಂಗಳೂರು : ಅಬ್ಬಬ್ಬಾ..! 5 ಕೋಟಿ ಮೌಲ್ಯದ ಚಿನ್ನ. ಲಂಡನ್‌ ಹಾಗೂ ದುಬೈನಲ್ಲಿ ಬಂಗಲೆ. ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೊ ಬರೋಬ್ಬರಿ 1,400 ಕೋಟಿ ಒಡತಿ.

ದಕ್ಷಿಣ ಗೋವಾದ ಬಿಜೆಪಿ ಮೊದಲ ಮಹಿಳಾ ಅಭ್ಯರ್ಥಿ ಪಲ್ಲವಿ ಡೆಂಪೊ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ಪಲ್ಲವಿ ಡೆಂಪೂ 255.4 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಮೌಲ್ಯ 28.2 ಕೋಟಿ ರೂ. ಇದೆ. ಇನ್ನೂ ಡೆಂಪೋ ಗ್ರೂಪ್ ಅಧ್ಯಕ್ಷರಾಗಿರುವ ಅವರ ಪತಿ ಶ್ರೀನಿವಾಸ್ ಒಡೆತನದಲ್ಲಿ ಸ್ತಿ 994.8 ಕೋಟಿ ರೂ. ಆಸ್ತಿ ಇದೆ.

ದುಬೈನಲ್ಲಿ 2.5 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಲಂಡನ್‌ನಲ್ಲಿ 10 ಕೋಟಿ ರೂ.ನ ಅಪಾರ್ಟ್ಮೆಂಟ್ ಇದೆ. 5.7 ಕೋಟಿ ಮೌಲ್ಯದ ಚಿನ್ನವನ್ನು ಹೊಂದಿದ್ದಾರೆ.

ಪಲ್ಲವಿ ಡೆಂಪೂ ಅವರು 2023ರಲ್ಲಿ 10 ಕೋಟಿ ರೂ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ. ಪಲ್ಲವಿ ಪತಿ 11 ಕೋಟಿ ರೂ. ರಿಟರ್ನ್ಸ್ ಸಲ್ಲಿಸಿದ್ದಾರೆ. ಗೋವಾ ಮತ್ತು ಭಾರತದ ಇತರ ಸ್ಥಳಗಳಲ್ಲಿ ಆಸ್ತಿ ಹೊಂದಿದ್ದಾರೆ.

ಪಲ್ಲವಿ ಅವರು ಡೆಂಪೊ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಡೆಂಪೊ ಚಾರಿಟೀಸ್ ಟ್ರಸ್ಟ್‌ನಲ್ಲಿ ಟ್ರಸ್ಟಿಯಾಗಿದ್ದಾರೆ.

RELATED ARTICLES

Related Articles

TRENDING ARTICLES