Thursday, May 2, 2024

ನರೈನ್ ಆರ್ಭಟಕ್ಕೆ RR ಉಡೀಸ್ : 56 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ವಿಂಡೀಸ್ ದಾಂಡಿಗ

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್​ ಸುನಿಲ್​ ನರೈನ್​ ಸ್ಫೋಟಕ ಶತಕ ಸಿಡಿಸಿದರು. ಐಪಿಎಲ್​ನಲ್ಲಿ ಇದು ಅವರ ಚೊಚ್ಚಲ ಶತಕವಾಗಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್​ ಗಳಿಸಿತು.

ಇನ್ನಿಂಗ್ಸ್​ ಆರಂಭಿಸಿದ ಕೆಕೆಆರ್​ಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್​ 10 ರನ್​ಗೆ ಔಟಾದರು. ಬಳಿಕ ಜೊತೆಯಾದ ನರೈನ್ ಹಾಗೂ ರಘುವಂಶಿ ಉತ್ತಮ ಪ್ರದರ್ಶನ ನೀಡಿದರು. ರಘುವಂಶಿ 30 ರನ್​ಗಳ ಕಾಣಿಕೆ ನೀಡಿದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ 11 ರನ್​ಗೆ ಆಟ ಮುಗಿಸಿದರು.

ಬಿಗ್ ಹಿಟರ್ ಆಂಡ್ರೆ ರಸೆಲ್ 13 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಸುನಿಲ್ ನರೈನ್ ತಮ್ಮ ಸ್ಫೋಟಕ ಆಟ ಮುಂದುವರಿಸಿದರು. 56 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 13 ಬೌಂಡರಿಗಳ ನೆರವಿನೊಂದಿಗೆ ಬೊಂಬಾಟ್ ಶತಕ (109) ಸಿಡಿಸಿದರು. ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.

ಅಶ್ವಿನ್, ಚಹಾಲ್, ಕುಲದೀಪ್ ದುಬಾರಿ

ನರೈನ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಿಂಕು ಸಿಂಗ್​ ಮಿಂಚಿನ ಆಟ ಪ್ರದರ್ಶಿಸಿದರು. 9 ಎಸೆತಗಳಲ್ಲಿ 20 ರನ್​ ಗಳಿಸಿದರು. ವೆಂಕಟೇಶ್ ಅಯ್ಯರ್ 8 ರನ್​ ಸಿಡಿಸಿದರು. ರಾಜಸ್ಥಾನ್ ಪರ ಆವೇಶ್ ಖಾನ್ ಹಾಗೂ ಕುಲದೀಪ್ ಸೇನ್ ತಲಾ 2, ಟ್ರೆಂಟ್ ಬೌಲ್ಟ್, ಹಾಗೂ ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು. ಅಶ್ವಿನ್ 49, ಚಹಾಲ್ 54 ಹಾಗೂ ಕುಲದೀಪ್ 46 ರನ್ ಬಿಟ್ಟುಕೊಟ್ಟು ದುಬಾರಿಯಾದರು.

RELATED ARTICLES

Related Articles

TRENDING ARTICLES