Thursday, May 2, 2024

ಶೇ.90 ರಷ್ಟು ಸನಾತನಿಗಳೇ ಸಂವಿಧಾನ ರಚಿಸಿದ್ದಾರೆ : ಪ್ರಧಾನಿ ಮೋದಿ

ಬಿಹಾರ : ಶೇ.80 ರಿಂದ 90 ರಷ್ಟು ಸನಾತನಿಗಳು ಭಾರತದ ಶ್ರೇಷ್ಠ ಸಂವಿಧಾನವನ್ನು ರಚಿಸಲು ಅಂಬೇಡ್ಕರ್ ಅವರನ್ನು ಬೆಂಬಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಹಾರದ ಗಯಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗಯಾ ಸನಾತನ ಧರ್ಮವನ್ನು ಟೀಕಿಸುವವರಿಗೆ ಗೊತ್ತಿರಲಿ. ಶೇ.80ರಿಂದ 90ರಷ್ಟು ಸನಾತನಿಗಳೇ ಸಂವಿಧಾನವನ್ನು ರಚಿಸಿದ್ದಾರೆ ಎಂದು I.N.D.I.A ಒಕ್ಕೂಟಕ್ಕೆ ತಿರುಗೇಟು ನೀಡಿದ್ದಾರೆ.

ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನೆಯಲ್ಲಿ ಪ್ರಮುಖರಾಗಿದ್ದರು. ಡಾ. ಅಂಬೇಡ್ಕರ್ ಅವರು ಕರಡು ರಚಿಸಿದ್ದಾರೆ. ಸನಾತನವನ್ನು ನಿಂದಿಸುವವರು ತಿಳಿಯಬೇಕಾದ ವಿಷಯ ಇದು. ಭಾರತದ ಸಂವಿಧಾನ ರಚನೆ ಸಭೆಯಲ್ಲಿ ಶೇ.80 ರಿಂದ 90% ಸನಾತನಿಗಳು ಶ್ರೇಷ್ಠ ಸಂವಿಧಾನವನ್ನು ರಚಿಸಲು ಅಂಬೇಡ್ಕರ್ ಅವರನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಸಂವಿಧಾನವು ಶುದ್ಧವಾಗಿದೆ

ನಮ್ಮ ಸಂವಿಧಾನವು ಶುದ್ಧವಾಗಿದೆ. ಸಂವಿಧಾನ ರಚನೆಕಾರರು ಸಮೃದ್ಧ ಭಾರತದ ಕನಸು ಕಂಡಿದ್ದರು. ಆದರೆ, ದೇಶದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್​ನಿಂದ ಕನಸ್ಸನ್ನು ನನಸು ಮಾಡುವ ಅವಕಾಶ ಕಳೆದುಕೊಂಡಿದೆ. ಆದರೆ, ನಿಮ್ಮ ಸೇವಕ 25 ಕೋಟಿ ಬಡವರನ್ನು ಬಡತನದಿಂದ ಹೊರತಂದಿದ್ದಾನೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ರದ್ದು ಮಾಡಲು ಸಾಧ್ಯವಿಲ್ಲ

ಸಂವಿಧಾನದ ಮೇಲೆ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಅಂಬೇಡ್ಕರ್ ಕೂಡ ಈಗ ಸಂವಿಧಾನವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ.

RELATED ARTICLES

Related Articles

TRENDING ARTICLES