Sunday, May 19, 2024

ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯವು ಏಪ್ರಿಲ್ 23ರ ವರೆಗೆ ವಿಸ್ತರಿಸಿದೆ.

ತನಿಖೆಯು ಮಹತ್ವದ ಹಂತದಲ್ಲಿದ್ದು, ಅರವಿಂದ್ ಕೇಜ್ರಿವಾಲ್ ಕಸ್ಟಡಿ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ED)ಮನವಿ ಮಾಡಿತ್ತು. ಅದರಂತೆ, ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಸಂಬಂಧ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಇ.ಡಿ ಕಸ್ಟಡಿ ಅವಧಿ ಏಪ್ರಿಲ್ 1ರಂದು ಮುಕ್ತಾಯವಾದ ಕಾರಣ ಕೇಜ್ರವಾಲ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು, ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.

ಕ್ರಿಮಿನಲ್ ರೀತಿ ನಡೆಸಿಕೊಳ್ಳುತ್ತಿದೆ

ದೆಹಲಿಯ ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಒಬ್ಬ ಕಟ್ಟಾ ಕ್ರಿಮಿನಲ್ ರೀತಿಯಲ್ಲಿ ನೆಡೆಸಿಕೊಳ್ಳಲಾಗುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಆರೋಪಿಸಿದ್ದಾರೆ. ಇಂದು ಭಗವಂತಮಾನ್ ಅವರು ತಿಹಾರ್ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ಜೈಲಿನಲ್ಲಿ ಸುಮಾರು ಒಂದೂವರೆಗಂಟೆ ಕಾಲ ಸುದೀರ್ಘ ಮಾತುಕತ ನಡೆಸಿದ್ದಾರೆ.

ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿದ್ದು ತಪ್ಪೇ?

ಬಳಿಕ ಮಾತನಾಡಿದ ಭಗವಂತ ಮಾನ್, ಅರವಿಂದ್ ಕೇಜ್ರಿವಾಲ್​ ಅವರನ್ನು ಗಾಜಿನ ತಡೆಗೋಡೆಯ ಹಿಂದೆ ನಿಲ್ಲಿಸಲಾಗಿತ್ತು. ಜೈಲಿನಲ್ಲಿ ಸಾಮಾನ್ಯ ಖೈದಿಗಳಿಗೂ ಸಿಗಬಹುದಾದ ಸೌಲಭ್ಯವನ್ನೂ ಸಹ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿಲ್ಲ. ಅವರು ಮಾಡಿರುವ ಅಪರಾಧವಾದರೂ ಏನು? ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿದ್ದು ತಪ್ಪೇ? ಉಚಿತವಾಗಿ ವಿದ್ಯುತ್ ವಿತರಣೆ ಮಾಡಿದ್ದು ತಪ್ಪೇ? ಅವರನ್ನು ದೊಡ್ಡ ಕ್ರಿಮಿನಲ್ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES