Sunday, May 19, 2024

ಆನಂದಸ್ವಾಮಿ ಗಡ್ಡದೇವರಮಠ 55 ಕೋಟಿ ಆಸ್ತಿಯ ಕುಬೇರ

ಹಾವೇರಿ : ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ 55.67 ಕೋಟಿ ರೂ. ಮೌಲ್ಯದ ಘೋಷಿಸಿಕೊಂಡಿದ್ದಾರೆ.

ಆನಂದಸ್ವಾಮಿ ಗಡ್ಡದೇವರಮಠ ಅವರ ಬಳಿ 50 ಸಾವಿರ ರೂ. ನಗದು ಇದೆ. ಬ್ಯಾಂಕ್‌ ಮತ್ತು ಫೈನಾನ್ಸ್‌ಗಳಲ್ಲಿ 1.69 ಕೋಟಿ ರೂ. ಹೊಂದಿದ್ದು, ವಿಮೆ, ಅಂಚೆ ಕಚೇರಿ ಇತ್ಯಾದಿಗಳಲ್ಲಿ 7.76 ಕೋಟಿ ರೂ. ಠೇವಣಿ ಹೊಂದಿದ್ದಾರೆ.

ವಿವಿಧ ಸಂಸ್ಥೆ, ಫರ್ಮ್ಸ್‌, ಟ್ರಸ್ಟ್‌ಗಳು ಹಾಗೂ ವೈಯಕ್ತಿಕ ಸಾಲವಾಗಿ 5.15 ಕೋಟಿ ರೂ. ತೆಗೆದುಕೊಂಡಿದ್ದಾರೆ. ಒಂದು ಹೊಂಡಾ ಸಿಟಿ ಕಾರು, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಬ್ರಿಡ್ ಹಾಗೂ ಒಂದು ಬೈಕ್ ಸೇರಿದಂತೆ 50.54 ಲಕ್ಷ ರೂ. ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ.

80 ಸಾವಿರ ಮೌಲ್ಯದ ಚಿನ್ನಾಭರಣವಿದ್ದು, ಇವರ ಪತ್ನಿ ಬಳಿ 60 ಸಾವಿರ ರೂ. ನಗದು ಸೇರಿದಂತೆ 6.80 ಲಕ್ಷ ಮೌಲ್ಯದ ಚರಾಸ್ತಿ ಇದೆ. ಮೊದಲ ಪುತ್ರಿ ಬಳಿ 30.29 ಲಕ್ಷ, ಎರಡನೇ ಪುತ್ರಿ ಬಳಿ 10.28 ಲಕ್ಷ, ಮೂರನೇ ಪುತ್ರಿ ಬಳಿ 10.08 ಲಕ್ಷ ಹಾಗೂ ಪುತ್ರನ ಬಳಿ 6.72ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಪತ್ನಿ ಬಳಿ 46.72 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ ಎಂದು ಆನಂದಸ್ವಾಮಿ ಗಡ್ಡದೇವರಮಠ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES