Sunday, May 12, 2024

ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್​ನ ಸುಲ್ತಾನ್ : ನರೇಂದ್ರ ಮೋದಿ

ಮೈಸೂರು : ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್​(I.N.D.I.A)ನ ಸುಲ್ತಾನ್. ಈ ತುಕ್ಡೇ ತುಕ್ಡೇ ಗ್ಯಾಂಗ್​​ಗೆ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ತುಷ್ಠೀಕರಣ ರಾಜಕೀಯ ಮಾಡ್ತಿದೆ. ಕಾಂಗ್ರೆಸ್​ನಲ್ಲಿ ಭಾರತ್ ಮಾತಾಕಿ ಜೈ ಎನ್ನಲು ಅನುಮತಿ ಬೇಕು. ಒಬ್ಬ ಶಾಸಕ ಜೈ ಎನ್ನಲು ವೇದಿಕೆಯಲ್ಲಿರೋರ ಪರ್ಮಿಷನ್ ಕೇಳ್ತಾರೆ ಎಂದು ಕುಟುಕಿದರು.

ಐಟಿಸಿಟಿ ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ ಮೋದಿ, ಬೆಂಗಳೂರು ನೀರು ಇಲ್ಲದೇ ಬಾಯಾರಿದೆ. ದೇಶದ ಐಟಿ ಹಬ್ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ಟ್ಯಾಂಕರ್ ನೀರಿನ ಕರಾಳ ದಂಧೆಯೂ ನಡೆಯುತ್ತಿದೆ. ಲೂಟಿಯಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಐಟಿ ಹಬ್ ಬೆಂಗಳೂರು ಘನಘೋರ ಸಮಸ್ಯೆಗೆ ತುತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಧರ್ಮ ನಾಶ ಮಾಡುವ ಹುನ್ನಾರ

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ನವರು ಅಪಮಾನ ಮಾಡಿದ್ದಾರೆ. ಹಿಂದೂ ಧರ್ಮವನ್ನು ನಾಶ ಮಾಡಲು ಕಾಂಗ್ರೆಸ್ ನವರು ಹುನ್ನಾರ ನಡೆಸಿದ್ದಾರೆ. ಆದರೆ, ಮೋದಿ ಇರುವವರೆಗೂ ಇದು ಸಾಧ್ಯವಿಲ್ಲ. ಇದು ಮೋದಿಕಾ ಗ್ಯಾರಂಟಿ ಆಗಿದೆ. 2024ರ ಚುನಾವಣೆ ಮುಂದಿನ 5 ವರ್ಷಕ್ಕೆ ಮಾತ್ರವಲ್ಲ. 2047ರವರೆಗೂ ವಿಕಸಿತ ಭಾರತಕ್ಕಾಗಿ ಈ ಚುನಾವಣೆ ಎಂದು ಹರಿಹಾಯ್ದರು.

ದೇಶ ವಿಭಜನೆ ಬಗ್ಗೆ ಮಾತಾಡಿದವರಿಗೆ ಟಿಕೆಟ್ ಕೊಟ್ಟಿದೆ

ದೇಶವನ್ನು ದುರ್ಬಲಗೊಳಸುವುದೇ ಕಾಂಗ್ರೆಸ್ ಅಜೆಂಡಾ ಆಗಿದೆ. ದೇಶ ವಿಭಜನೆಯ ಕುರಿತು ಮಾತನಾಡಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಒಂದೇ ಮಾತರಂ ವಿರೋಧಿಸಿದವರು ಇದೀಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್​ನ ಪತನಕ್ಕೆ ನಾಂದಿಯಾಗಲಿದೆ ಎಂದು ನರೇಂದ್ರ ಮೋದಿ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES