Tuesday, May 14, 2024

ರಾಜಕೀಯ ಭೀಷ್ಮನ ಜೊತೆ ‘ನಮೋ’ : ಸಿದ್ದರಾಮಯ್ಯ ತವರಲ್ಲಿ ಹಾಲಿ-ಮಾಜಿ ಪ್ರಧಾನಿಗಳ ಮತಬೇಟೆ

ಬೆಂಗಳೂರು : ಇಡೀ‌ ದೇಶವನ್ನೆ ಗೆಲ್ಲಬೇಕು ಎಂದು ಹೊರಟಿರೋ ಬಿಜೆಪಿಗೆ ಮೋದಿಯೇ ಉಸಿರು. ಮೋದಿ ಬಂದು ಪ್ರಚಾರ ಮಾಡಿದ್ರೆ ಗೆಲುವು ಫಿಕ್ಸ್ ಎಂದು‌ ನಂಬಿದ್ದಾರೆ ಕೇಸರಿ ಕಲಿಗಳು. ಕರುನಾಡ ಲೋಕ ಅಖಾಡಕ್ಕೆ ಎಂಟ್ರಿ ಕೊಡ್ತಿರೋ ಮೋದಿ, ನಾಳೆ ಮೈಸೂರು ಹಾಗೂ ಮಂಗಳೂರಲ್ಲಿ ರಣಕಹಳೆ ಮೊಳಗಿಸಲಿದ್ದಾರೆ. ಪ್ರಧಾನಿ ಮೋದಿ ಜೊತೆ ಮೈತ್ರಿ ಗೆಳೆಯ ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೆಗೌಡರು ಸಾಥ್ ನೀಡುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಕಾವು ನಿಧಾನವಾಗಿ ಏರತೊಡಗಿದೆ.‌ ಒಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಸುಮಾರು ದಿನದಿಂದ ಮೈಸೂರಿನಲ್ಲಿಯೇ ಬಿಡುಬಿಟ್ಟಿರೋ ಸಿಎಂ, ಬಿಜೆಪಿ ವಿರುದ್ದ ಅಬ್ಬರಿಸುತ್ತಿದ್ದಾರೆ.

ಇತ್ತ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್​ ಒಡೆಯರ್​ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.  ಹೀಗಾಗಿ, ಸಿಎಂಗೆ ತಿರುಗೇಟು ಕೊಡಲು‌ ಬಿಜೆಪಿ ಪ್ರಧಾನಿ ಮೋದಿಯನ್ನ ರಣಾಂಗಣಕ್ಕೆ ಇಳಿಸಿದ್ದು, ಭಾನುವಾರ ಮೈಸೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮೋದಿಗೆ ದೇವೇಗೌಡ್ರು ಸಾಥ್

ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್.ಡಿ. ದೇವೇಗೌಡರು ಸಾಥ್ ನಿಡಲಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ದ ದೊಡ್ಡಗೌಡರು ಮತ್ತೆ ಗುಡುಗುವ ಸಾಧ್ಯತೆ ಇದೆ. ಸಂಜೆ 4 ಗಂಟೆಗೆ ಮೋದಿ‌ ಮಧ್ಯಪ್ರದೇಶದಿಂದ ಮೈಸೂರಿಗೆ ಆಗಮಿಸಲಿದ್ದು, 4.30 ರಿಂದ 5.20ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ  ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮಂಗಳೂರಲ್ಲಿ ‘ನಮೋ’ ಮತಬೇಟೆ

ಇನ್ನು ಮೈಸೂರಿನ‌ ನಂತರ ನರೆಂದ್ರ ಮೋದಿ ಮಂಗಳೂರಲ್ಲಿ ಮತಬೇಟೆಗೆ ಇಳಿಯಲಿದ್ದಾರೆ. ಮೈಸೂರಿನ ಸಮಾವೇಶಸದ ನಂತರ ಸಂಜೆ 6.45ಕ್ಕೆ ಮೈಸೂರಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 7 ರಿಂದ 8 ಗಂಟೆವರೆಗೆ ಬೃಹತ್​ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ನಾರಾಯಣ ಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ಮೋದಿ ರೋಡ್ ಶೋ‌ ನಡೆಸಲಿದ್ದು, ಉಡುಪಿ ಚಿಕ್ಕಮಗಳೂರು ಅಭ್ಯರ್ಥಿಯ ಪರ ಮತ ಬೇಟೆಯಾಡಲಿದ್ದಾರೆ.

ಮಂಗಳೂರು ರೋಡ್ ಶೋ ಮುಗಿಯುತ್ತಿದ್ದಂತೆ ರಾತ್ರಿ 8.30ಕ್ಕೆ ಕೇರಳದ ಕೊಚ್ಚಿಗೆ ಮೋದಿ ತೆರಳಲಿದ್ದಾರೆ. ಮೋದಿ ಆಗಮನದಿಂದ ಬಿಜೆಪಿಯ ಮತಬೇಟೆಯ ಹೊಸ ಅಧ್ಯಾಯ ‌ಆರಂಭವಾಗಲಿದ್ದು, ಇದು ಬಿಜೆಪಿಗೆ ಯಾವ ರೀತಿ ಪ್ಲಸ್ ಆಗುತ್ತೆ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES