Wednesday, May 22, 2024

ರಾಮನ ಮೇಲೆ ಆಣೆ ಮಾಡಿ ಹೇಳಿ 15 ಲಕ್ಷ ಸಿಕ್ತಾ? : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ರಾಮನ ಮೇಲೆ ಆಣೆ ಮಾಡಿ ಹೇಳಿ 15 ಲಕ್ಷ ಸಿಕ್ತಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ವಿದೇಶದಿಂದ ಹಣ ತರುತ್ತೇವೆ 15 ಲಕ್ಷ ಕೊಡ್ತಿನಿ ಅಂತ ಹೇಳಿದ್ರಿ, ಎಲ್ಲಿದೆ ಅದು? ಜನತೆ ತೀರ್ಮಾನ ಮಾಡಿ ಮೋದಿ ಸುಳ್ಳೋ, ಖರ್ಗೆ ಹೇಳಿದ್ದು ಸುಳ್ಳೋ ನೀವೆ ಹೇಳಿ ಎಂದು ಕುಟುಕಿದರು.

ಸೋನಿಯಾ ಗಾಂಧಿ ಫುಡ್ ಸೆಕ್ಯುರಿಟಿ ಕೊಟ್ಟಿದ್ದಾರೆ. ಐದು ಉಚಿತ ಗ್ಯಾರಂಟಿಯಿಂದ ಬಡವರು ಸ್ವಲ್ಪ ಉಸಿರಾಡುತ್ತಿದ್ದಾರೆ. ನಾವು ಇವತ್ತು ಕೆಲಸಕ್ಕಾಗಿ ವೋಟ್ ಕೇಳ್ತಿದ್ದೇವೆ. ಕೆಲಸ ಮಾಡುವವರಿಗೆ ಮತ ಕೋಡಿ‌. ಕೆಲಸ ಬೇಕು ಅಂದ್ರೆ ಕಾಂಗ್ರೆಸ್​ಗೆ ಮತ ಕೊಡಿ. ಕೆಲಸ ಬೇಡ ಅಂದ್ರೆ ನಿಮಗೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ಬಿಜೆಪಿಗೆ ವೋಟು ಹಾಕಬೇಡಿ ಎಂದು ಕರೆ ಕೊಟ್ಟರು.

ಕರ್ನಾಟಕದಲ್ಲೇ 37 ರೈಲು ಬಿಟ್ಟಿದ್ದೇನೆ

ಕರ್ನಾಟಕದಲ್ಲೇ 37 ರೈಲು ಬಿಟ್ಟಿದ್ದೇನೆ, ಒಂದೂ ತೋರಿಸಿಲ್ಲ. ನಾನು ಪ್ರಚಾರ ತೆಗೆದುಕೊಂಡಿಲ್ಲ, ನಾವು ಕೆಲಸ ಮಾಡೋರು. ನನಗೆ ಯಾರು ಕೇಳಿಲ್ಲ ಕೇಂದ್ರ ಯುನಿವರ್ಸಿಟಿ ಮಾಡಿ ಅಂತ. ಯಾರು ಕೇಳಿರಲಿಲ್ಲ ಟೆಕ್ಸ್ ಟೈಲ್ ಪಾರ್ಕ್ ಘೋಷಣೆ ಮಾಡಿ ಅಂತ. ಭ್ರಷ್ಟರನ್ನ ನಹೀ ಛೋಡೆಂಗೆ ಅಂತಿರಲ್ಲ, ಭ್ರಷ್ಟರನ್ನ ನಿಮ್ಮ ಪಕ್ಕದಲ್ಲೇ ಇಟ್ಟುಕೊಂಡು ಕುಳಿತಿದ್ದಿರಲ್ಲ. ಮೋದಿ, ಅಮಿತ್ ಶಾ ಅಂತಹವರಿಂದ ಹುಷಾರಾಗಿರಬೇಕು ಎಂದು ಕರೆ ಕೊಟ್ಟರು.

ಕಲಬುರಗಿ ಮರ್ಯಾದೆ ಉಳಿಸಬೇಕು

ಕಳೆದ ಬಾರಿಯ ಚುನಾವಣೆಯಲ್ಲಿ ಏನು ಆಯಿತೋ ಆಯಿತು‌. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನೀವು ಗೆಲ್ಲಿಸಬೇಕು. ಆ ಮೂಲಕ ಕಲಬುರಗಿ ಮರ್ಯಾದೆ ಉಳಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

RELATED ARTICLES

Related Articles

TRENDING ARTICLES